ಬಡತನ ಕಲಿಕೆಗೆ ಅಡ್ಡಿಯಾಗದು

h18-lingaraj nagara
Published on

ಹುಬ್ಬಳ್ಳಿ: ಕಲಿಕೆಗೆ ಬಡತನ ಅಡ್ಡಿಯಾಗದು. ವಿದ್ಯಾರ್ಥಿನಿಯರು ಲಭ್ಯವಿರುವ ಸೌಲಭ್ಯಗಳಲ್ಲಿಯೇ ಅತ್ಯಂತ ಆಸಕ್ತಿಯಿಂದ ಕಲಿತು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಧಾರವಾಡ ಲಯನ್ಸ್ ಕ್ಲಬ್ ಅಧ್ಯಕ್ಷ ಭುಜಂಗ ಶೆಟ್ಟಿ ಹೇಳಿದರು.

ಶ್ರೀಮತಿ ನಿಂಗಮ್ಮ ಹೂಗಾರ ಶಿಕ್ಷಣ ಮತ್ತು ಸಂಶೋಧನ ಪ್ರತಿಷ್ಠಾನದ ವತಿಯಿಂದ ಇಲ್ಲಿನ ಲಿಂಗರಾಜನಗರದ ಬಿವಿಕೆವಿಸಿಬಿ ಬಾಲಿಕೆಯರ ಪ್ರೌಢಶಾಲೆಯಲ್ಲಿ ಶನಿವಾರ ವಿದ್ಯಾರ್ಥಿನಿಯರಿಗೆ ಉಚಿತ ಶಾಲಾ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಆನಂದ ಕಮಲಾಪುರ, ಹೂಗಾರ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಚೀಫ್ ಟ್ರಸ್ಟಿ ಹಾಗೂ ಲಯನ್ಸ್ ಕ್ಲಬ್ ಖಜಾಂಚಿ ನಮ್ರತಾ ಪಾಟೀಲ್, ಕವಿ, ಕಲಾವಿದ ಎಸ್.ಎಸ್. ಚಿಕ್ಕಮಠ ಮಾತನಾಡಿದರು. ಎಸ್.ಎಸ್. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಪಿ.ಎಂ. ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಕೆ. ದೊಡ್ಡಮನಿ ನಿರೂಪಿಸಿದರು. ಎಸ್.ಎಂ. ಯಲಿಗಾರ ಸ್ವಾಗತಿಸಿದರು. ವಿ.ಎಂ. ಪಟ್ಟಣಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net