

ಬೆಳಗಾವಿ:ತಾಲೂಕಿನ ತಾರಿಹಾಳ ಗ್ರಾಮದ ಶ್ರೀ ಪಾವನ ಕ್ಷೇತ್ರ ಬಡೆಕೊಳ್ಳಮಠದಲ್ಲಿ ಪ್ರತಿವರ್ಷದ ಪದ್ದತಿಯಂತೆ ಈ ವರ್ಷವು ಪವಾಡ ಪುರುಷ ನಾಗೇಂದ್ರ ಮಹಾಸ್ವಾಮಿಗಳ ಶ್ರಾವಣ ಮಾಸದ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಮಠದ ಶ್ರೀನಾಗಯ್ಯ ಸ್ವಾಮೀಜಿ ತಿಳಿಸಿದ್ದಾರೆ.ಇದೇ ಸೆ.13 ರಂದು ಪಲ್ಲಕ್ಕಿ ಬರಮಾಡಿಕೊಳ್ಳುವುದು. ಸೆ.14ರಂದು ಬೆಳಗ್ಗೆ ಮಹಾರುದ್ರಾಭೀಷೇಕ, ಬಳಿಕ ಅಜ್ಜನವರ ಪಾದಪೂಜೆ, ರಥೋತ್ಸವ ಹಾಗೂ ಮಹಾಪ್ರಸಾದ ನಡೆಯಲಿದೆ. ಅದೇ ದಿನ ಸಂಜೆ 5ಕ್ಕೆ ಪಲ್ಲಕ್ಕಿ ಬಿಳ್ಕೊಡುವ ಸಮಾರಂಭದ ನಂತರ ಜಾತ್ರೆಯು ಸಮಾರೋಪಗೊಳ್ಳಲಿದೆ. ಪ್ರತಿವರ್ಷ ಆಗಮಿಸಿದ ಬಡೆಕೊಳ್ಳಮಠದ ಭಕ್ತಾಧಿಗಳು, ಅಜ್ಜನವರ ದರ್ಶನಾರ್ಶಿವಾದ ಪಡೆಯಬೇಕು ಎಂದು ಬಡೆಕೊಳ್ಳಮಠದ ಪ್ರಕಟಣೆ ತಿಳಿಸಿದೆ.