ಬಡ ಹೆಣ್ಣು ಮಕ್ಕಳ ವಿವಾಹ ದೇವರು ಮೆಚ್ಚುವ ಕಾರ್ಯ

01Kush01
ಕುಶಾಲನಗರದ ಅಲ್ ಇಹ್ಸಾನ್ ಅಸೋಸಿಯೇಷನ್ ವತಿಯಿಂದ 13ನೇ ವರ್ಷದ ಬಡ ಹೆಣ್ಣು ಮಕ್ಕಳ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದ ಪಾಣಕ್ಕಾಡಿನ ಸಯ್ಯದ್ ಜೈನುಲ್ ಆಬಿದಿನ್ ತಂಜ್ಞಳ್, ಹಿಲಾಲ್ ಮಸೀದಿಯ ಧರ್ಮಗುರು ಜನಾಬ್ ಸೂಫಿದಾರಿಮಿ, ಕುಶಾಲನಗರ ಪುರಸಭೆ ಅಧ್ಯಕ್ಷ ಜಯವರ್ಧನ್, ಎಂ.ಎಂ.ಚರಣ್, ಉದ್ಯಮಿ ಶಾಹಿರ್ ಹಾಜಿ ಇತರರು ಹಾಜರಿದ್ದರು.
Published on

ಕುಶಾಲನಗರ: ಬಡ ಕುಟುಂಬದ ಹೆಣ್ಣು ಮಕ್ಕಳ ವಿವಾಹ ಕಾರ್ಯವು ದೇವರು ಅತ್ಯಂತ ಇಷ್ಟಪಡುವ ವಿಷಯಗಳಲ್ಲಿ ಒಂದಾಗಿದೆ ಎಂದು ಪಾಣಕ್ಕಾಡಿನ ಸಯ್ಯದ್ ಜೈನುಲ್ ಆಬಿದಿನ್ ತಂಜ್ಞಳ್ ಹೇಳಿದರು.
ಪಟ್ಟಣದ ಅಲ್ ಇಹ್ಸಾನ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 13ನೇ ವರ್ಷದ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡ ಹೆಣ್ಣು ಮಕ್ಕಳ ಜೀವನದ ಬಾಗಿಲನ್ನು ತೆರೆಯುವ ಕೆಲಸವನ್ನು ಅಲ್ ಇಹ್ಸಾನ್ ಅಸೋಸಿಯೇಷನ್ ಮಾಡುತ್ತಿದೆ. ಮುಂದೆಯೂ ಇನ್ನಷ್ಟು ಸತ್ಕಾರ್ಯಗಳಿಗೆ ಈ ಸಂಘ ಸಾಕ್ಷಿಯಾಗಲಿ ಎಂದರು.
ಹಿಲಾಲ್ ಮಸೀದಿಯ ಧರ್ಮಗುರು ಜನಾಬ್ ಸೂಫಿದಾರಿಮಿ ಮಾತನಾಡಿ, ದಾಂಪತ್ಯ ಜೀವನದ ಬಗ್ಗೆ ವಿವರಣೆ ನೀಡಿದರು. ಕುಶಾಲನಗರ ಪುರಸಭೆ ಅಧ್ಯಕ್ಷ ಜಯವರ್ಧನ್, ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಚರಣ್, ಪ್ರಾಂಶುಪಾಲ ತಮ್ಲೀಕ್ ದಾರಿಮಿ, ಹಿಲಾಲ್ ಮಸೀದಿ ಅಧ್ಯಕ್ಷ ಎಂ.ಎಂ.ಹುಸೇನ್, ಕಾರ್ಯದರ್ಶಿ ಅಬ್ದುಲ್ ಮಜೀದ್, ಜಾಮಿಯಾ ಮಸೀದಿ ಅಧ್ಯಕ್ಷ ಮುಜೀಬು ರಹಮಾನ್, ಉದ್ಯಮಿ ಶಾಹಿರ್ ಹಾಜಿ, ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ಅಬ್ದುಲ್ ಕರೀಂ, ಪುರಸಭೆ ಸದಸ್ಯ ಖಲೀಮುಲ್ಲಾ, ಸಿ.ಎಂ.ಹಮೀದ್ ಉಸ್ತಾದ್ ಹಾಗೂ ಇಕ್ಬಾಲ್ ಮುಸ್ಲಿಯಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net