ಬಡ ಹೃದಯ ರೋಗಿಗಳಿಗೆ ಆರ್ಥಿಕ ಸಹಾಯ

bkt-29-3
ವಿಶ್ವ ಹೃದಯ ದಿನದ ಅಂಗವಾಗಿ ಕುಮಾರೇಶ್ವರ ಆಸ್ಪತ್ರೆಯಲ್ಲಿ ಭಾನುವಾರ ಇನ್ನರ್‌ವ್ಹೀಲ್ ಸಂಸ್ಥೆಯಿಂದ ಬಡ ಹೃದಯ ರೋಗಿಗಳಿಗೆ ಆರ್ಥಿಕ ಧನ ಸಹಾಯ ನೀಡಲಾಯಿತು.
Published on

ಬಾಗಲಕೋಟೆ: ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ಭಾನುವಾರ ವಿಶ್ವ ಹೃದಯ ದಿನದ ಅಂಗವಾಗಿ ಇನ್ನರ್‌ವ್ಹೀಲ್ ಸಂಸ್ಥೆಯಿಂದ ಬಡ ಹೃದಯ ರೋಗಿಗಳಿಗೆ ಆರ್ಥಿಕ ಧನ ಸಹಾಯ ನೀಡಿ ಮಾನವೀಯತೆ ಮೆರೆದರು.

ಬಾಗಲಕೋಟೆ ಇನ್ನರವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಶ್ರೀಲತಾ ಹೆರಂಜಲ್, ಕಾರ್ಯದರ್ಶಿ ಸುಮಂಗಲಾ ಹದ್ಲಿ ನೇತೃತ್ವದಲ್ಲಿ ಕುಮಾರೇಶ್ವರ ಆಸ್ಪತ್ರೆಯ ಹೃದಯ ರೋಗ ವಿಭಾಗದಲ್ಲಿ ಐದು ಜನ ಬಡ ಹೃದಯ ರೋಗಿಗಳ ಎಂಜಿಯೋಗ್ರಫಿ ಚಿಕಿತ್ಸೆಗೆ ಆರ್ಥಿಕ ಧನಸಹಾಯದ ಚಕ್‌ನ್ನು ಆಸ್ಪತ್ರೆಯ ಅಧೀಕ್ಷಕ ಡಾ.ಶ್ರೀರಾಮ ಕೋರಾ ಅವರಿಗೆ ಹಸ್ತಾಂತರಿಸಲಾಯಿತು.

ಅಲ್ಲದೆ ರೋಗಿಗಳಿಗೆ ಹಣ್ಣು ಹಂಪಲಗಳನ್ನು ಸಹ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹೃದಯರೋಗ ವಿಭಾಗದ ಡಾ.ಸಮೀರಕುಮಾರ ಕುಲಕರ್ಣಿ, ಡಾ.ಸಾಗರ ದೇಸಾಯಿ, ಇನ್ನರವ್ಹೀಲ್ ಸಂಸ್ಥೆಯ ಸಂಧ್ಯಾ ಮಿಸ್ಕಿನ್, ವೀಣಾ ವಾಘ, ಪೂರ್ಣಿಮಾ ಅಕ್ಕಿಮರಡಿ ಮತ್ತು ಜಯಲಕ್ಷ್ಮೀ ಪಾಟೀಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net