

ಬೀದರ್: ತಾಲ್ಲೂಕಿನ ಹಮಿಲಾಪುರದ ವಿ.ಎಂ. ರಾಂಪುರೆ ಪಬ್ಲಿಕ್ ಶಾಲೆಯು ನಗರದ ಓಲ್ಡ್‍ಸಿಟಿಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಮುಂದಾಗಿದೆ.
ಓಲ್ಡ್‍ಸಿಟಿಯ ಬಡ ವಿದ್ಯಾರ್ಥಿಗಳಿಗೆ 1 ರಿಂದ 5ನೇ ತರಗತಿ ವರೆಗೆ ಉಚಿತ ಪ್ರವೇಶ ಕಲ್ಪಿಸಲಾಗುವುದು ಎಂದು ವಿ.ಎಂ. ರಾಂಪುರೆ ಪಬ್ಲಿಕ್ ಶಾಲೆಯ ಅಧ್ಯಕ್ಷ ಮಹೇಶ ರಾಂಪುರೆ ತಿಳಿಸಿದ್ದಾರೆ.
ಹಮಿಲಾಪುರದ ಮುಖ್ಯ ಶಾಖೆಯಲ್ಲಿ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9731777282 ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.