ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಶಾಕಿರಣ

CTD AHSAHA KIRANA
Published on

ಚಿತ್ರದುರ್ಗ: ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ನಮ್ಮ ಸಂಸ್ಥೆ ಗುರಿಯಾಗಿದೆ ಎಂದು ನಗರದ ಆಶಾಕಿರಣ ಸಂಸ್ಥೆ ಆಧ್ಯಕ್ಷ ಗಿರೀಶ್ ಹೇಳಿದರು.
ಸಂಸ್ಥೆ ನಗರದ ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರೋಟರಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಋಣ ತೀರಿಸಲು ನಗರದ 13 ಸಮಾನ ಮನಸ್ಕರರು ಒಗ್ಗೂಡಿ ನಿರ್ಮಿಸಿದ ಸಂಸ್ಥೆ ನಮ್ಮದು. ಜಾತಿ, ಧರ್ಮ, ಭೇದ ಎಣಿಸದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪದವಿವರೆಗೆ ಆರ್ಥಿಕ ನೆರವು ಒದಗಿಸುವುದು ನಮ್ಮ ಉದ್ದೇಶ. ಇದುವರೆಗೆ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ ಎಂದು ವಿವರಿಸಿದರು.
ಸಂಸ್ಥೆ ನಿರ್ದೇಶಕ ಮಹೇಶ್, ಮಧುಪ್ರಸಾದ್, ಮೃಣಾಲಿನಿ, ಎಂ.ಪಿ. ಗುರುರಾಜ್ ಮಾತನಾಡಿದರು. ಕೇಶವಮೂರ್ತಿ, ಪ್ರವೀಣ್, ಪ್ರಸನ್ನಕುಮಾರ್, ನಾಗರಾಜ್, ರವಿಶಂಕರ್, ಹೇಮಂತ ರೆಡ್ಡಿ, ರಮೇಶ್, ಭಾನುಕಿರಣ್, ದಿವಾಕರ, ಸಿದಾರ್ಥ, ವೆಂಕಟೇಶ್ ಮತ್ತಿತರರು ಇದ್ದರು. ಮಾಧುರಿ ಮಧುಪ್ರಸಾದ್ ಪ್ರಾರ್ಥಿಸಿ, ಮಹೇಶ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net