ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ

0107 Chincholi 01A
Published on

ಚಿಂಚೋಳಿ: ಸರ್ಕಾರದ ಯೋಜನೆ ಹಾಗೂ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದೇ ನನ್ನ ಮುಖ್ಯ ಧ್ಯೇಯವಾಗಿದೆ ಎಂದು ಶಾಸಕ ಡಾ. ಅವಿನಾಶ ಜಾಧವ್ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶುದ್ಧ ಕುಡಿವ ನೀರಿನ ಘಟಕ ಹಾಗೂ ಬಟ್ಟೆ ಸ್ವಚ್ಛಗೊಳಿಸುವ ಯಂತ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಕರೊನಾ ಮಹಾಮಾರಿ ಮಧ್ಯೆ ಬಡ ರೋಗಿಗಳಿಗೆ ಗುಣ್ಣಮಟ್ಟದ ಚಿಕಿತ್ಸೆ ನೀಡುವತ್ತ ಗಮನಹರಿಸಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ರೋಗಿಗಳನ್ನು ಉತ್ತಮವಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದರು.
ಪ್ರಮುಖರಾದ ಡಾ. ಸಂಜಯಗೋಳೆ, ಡಾ. ಶಿವರಾಜ ಸಜ್ಜನಶೆಟ್ಟಿ, ಡಾ. ಸಂತೋಷ ಪಾಟೀಲ್, ಉಮೇಶ ಬೆಳಕೇರಿ, ಶಾಂತರೆಡ್ಡಿ ನರನಾಳ, ಕಿರಣರೆಡ್ಡಿ ಮಿರಿಯಾಣ, ಮಹ್ಮದ್ ಜುನೇದ್, ರಾಜಕುಮಾರ ಪವಾರ್, ಅಶೋಕ ಚವ್ಹಾಣ್, ಶ್ರೀಮಂತ ಕಟ್ಟಿಮನಿ, ಭೀಮಶೆಟ್ಟಿ ಮುರುಡಾ, ಲಕ್ಷ್ಮಣ ಆವಂಟಿ, ಅನೀಲಕುಮಾರ ಕಂಟ್ಲಿ, ಚಂದ್ರಶೆಟ್ಟಿ ಜಾಧವ್, ಹಣಮಂತ ಗಾರಂಪಳ್ಳಿ, ಮಹಾನಂದ ರೊಟ್ಟಿ, ಪವನಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net