

ಶಹಾಪುರ: ಸಾರ್ವಜನಿಕ ಆಸ್ಪತ್ರೆಗೆ ಬಡ ರೋಗಿಗಳೇ ಬರುತ್ತಾರೆ. ಹೀಗಾಗಿ ಅಂತಹ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಅವರ ಆರೋಗ್ಯ ಕಾಪಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ವಿವಿಧ ಸೇವೆಗಳ ವಿಭಾಗಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸರ್ಕಾರ ಬಡ ರೋಗಿಗಳ ಸೇವೆಗೆ ಸದಾ ಬದ್ಧವಾಗಿದೆ. ಬೇಕಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅವುಗಳ ಬಳಕೆ ಸರಿಯಾಗಿ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವೈದ್ಯರು ರೋಗಿಗಳನ್ನು ನಿರ್ಲಕ್ಷÈ ಮಾಡಬಾರದು ಎಂದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ನೂತನ ಮೂರು ಡಯಾಲಿಸಿಸ್‌ಯಂತ್ರ, ಸಿಟಿ ಸ್ಕಾö್ಯನ್, ಅಲ್ಟಾç ಸೌಂಡ್ ಸ್ಕಾö್ಯನ್ ಪ್ರಯೋಗಾಲಯ ಕೇಂದ್ರ, ರಕ್ತ ಶೇಖರಣಾ ಘಟಕ ಆರಂಭಿಸಲಾಗಿದೆ. ಇವು ಇಲ್ಲಿಗೆ ಬರುವ ರೋಗಿಗಳ ಚಿಕಿತ್ಸೆಗೆ ಉತ್ತಮವಾಗಿ ಸಹಕಾರಿಯಾಗಲಿವೆ ಎಂದರು. ಪ್ರತಿ ದಿನ ಡಯಾಲಿಸಿಸ್‌ಗಾಗಿ ಯಾದಗಿರಿ ಮತ್ತು ಕಲಬುರಗಿಗೆ ತೆರಳಲು ರೋಗಿಗಳು ಹರಸಾಹಸ ಪಡುತ್ತಿದ್ದರು. ಇನ್ಮುಂದೆ ಅಂತಹ ಸನ್ನಿವೇಶ ಎದುರಾಗಲ್ಲ. ಈ ಸಾರ್ವಜನಿಕ ಆಸ್ಪತ್ರೆಯನ್ನು 150 ಹಾಸಿಗೆಗಳಿಗೆ ಮೇಲ್ದರ್ಜೆಗೆರಿಸಲಾಗಿದ್ದು, ತಾಯಿ ಮಕ್ಕಳ ಆಸ್ಪತ್ರೆ ಮತ್ತು ಹೈಟೆಕ್ ಆಸ್ಪತ್ರೆ ಕಟ್ಟಡ ಹಳೇ ತಹಸಿಲ್ ಕಚೇರಿ ಅವರಣದ¯್ಲೆ ನಿರ್ಮಿಸಲಾಗುವುದು. ಜಿ¯್ಲÁಸ್ಪತ್ರೆ ಮಟ್ಟದಲ್ಲಿಯೇ ಈ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗುವಂತಹ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ಬ್ಯಾಂಕ್‌ನ ಅಧಿಕಾರಿ ನಾಗಾರ್ಜುನರಡ್ಡಿ ಮಾತನಾಡಿ, ಬ್ಯಾಂಕ್‌ನಿAದ ಸಹಕಾರದಿಂದ ಇಂದು ಮೂರು ಡಯಾಲಿಸಿಸ್ ಯಂತ್ರ ಆಸ್ಪತ್ರೆಗೆ ನೀಡಿದ್ದು ಸಂತೋಷದ ವಿಷಯ. ಹೀಗೆ ಹಲವಾರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಜನರ ಪರವಾಗಿ ಬ್ಯಾಂಕ್ ಕೆಲಸ ಮಾಡುತ್ತಿದೆ ಎಂದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ.ಯಲ್ಲಪ್ಪ, ಹಿರಿಯ ತಜ್ಞ ವೈದ್ಯ ಡಾ.ವೆಂಕಟೇಶ ಬೈರಾಮಡಗಿ, ಡಾ. ಜಗದೀಶ ಉಪ್ಪಿನ್, ಡಾ.ರಾಘವೆಂದ್ರ, ಡಾ.ಸುರೇಖಾ ಪಾಟೀಲï, ಲಿಯಾಕತ ಪಾಷಾ ಖುರೇಶಿ ಇತರರಿದ್ದರು.