ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವು

13kglphoto1..
Published on

ಕೊಳ್ಳೇಗಾಲ: ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗುರುಮಲ್ಲೇಶ್ವರ ವಿದ್ಯಾಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ದೇವನೂರು ಮಠದ ಶ್ರೀ ಮಹಾಂತಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಗುರುಮಲ್ಲೇಶ್ವರ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ 8ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯಲ್ಲಿ ಹೆಚ್ಚಾಗಿ ಬಡ ಮಕ್ಕಳೇ ಓದುತ್ತಿದ್ದಾರೆ. ಇಲ್ಲಿಯವರೆಗೂ ಉತ್ತಮವಾಗಿ ಶಿಕ್ಷಣ ನೀಡುತ್ತ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಬಡ ಕುಟುಂಬ ಹಿನ್ನೆಲೆ ಇರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸ್ಥಂಸ್ಥೆ ಅನುಕೂಲ ಮಾಡಿಕೊಡುತ್ತದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್ ಮಾತನಾಡಿ, 16 ಮಕ್ಕಳಿಂದ ಪ್ರಾರಂಭವಾದ ಶಾಲೆಯಲ್ಲಿ ಇಂದು 536 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಸಂಸ್ಕಾರದಲ್ಲಿ ಬೆಳೆದ ಮಗು ದೇಶಕ್ಕೆ ಉತ್ತಮ ಪ್ರಜೆಯಾಗಿ ಹೊರ ಹೊಮ್ಮುತ್ತದೆ ಎಂದರು. ಗುರುಮಲ್ಲೇಶ್ವರ ಸಂಸ್ಥೆಯ ಕಾರ್ಯದರ್ಶಿ ಎಚ್.ಎಂ.ವೃಷಬೇಂದ್ರ ಮಾತನಾಡಿದರು.

ನಗರಸಭಾ ಸದಸ್ಯೆ ಕವಿತಾ ರಾಜೇಶ್, ಟೌನ್ ಠಾಣೆಯ ಎಸೈ ಮಹೇಶ್‌ಕುಮಾರ್, ಶಾಲೆಯ ನಿರ್ದೇಶಕ ಗೌಡರ ಶಿವಣ್ಣ, ಬಿಆರ್‌ಸಿ ಬಸವರಾಜು, ಸಿಆರ್‌ಪಿ ಸಮೀರಾ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಮಹದೇವ ಪ್ರಸಾದ್, ವೀರಶೈವ ಲಿಂಗಾಯಿತ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲೇಶಪ್ಪ, ರೈತ ಮುಖಂಡ ಅಣಗಳ್ಳಿ ಬಸವರಾಜು, ವೀರಶೈವ ಮುಖಂಡ ಗೊಂಬೆ, ಸ್ಥಳದ ದಾನಿಗಳಾದ ಹಲಗೇಶ್, ಮುಖ್ಯ ಶಿಕ್ಷಕಿ ಶಿವನಾಗಮ್ಮ, ನಿಲಯ ಮೇಲ್ವಿಚಾರಕ ದೊರೆಸ್ವಾಮಿ, ಶಿಕ್ಷಕರಾದ ಅಶ್ವಿನಿ, ಚಂದನಾ, ರಾಜಮ್ಮ, ಕುಸುಮಾ ಕುಮಾರಿ, ಹರಳೆ ಗಣೇಶ್, ಮನು, ಕಾವ್ಯಾ, ಶಕುಂತಲಾ, ಸೌಮ್ಯಶ್ರೀ, ಸ್ಫೂರ್ತಿ, ರಾಣಿ, ಸೌಭಾಗ್ಯ, ದೀಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net