ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವು

Basavaraj Dhannur
Published on

ಬೀದರ್: ಇಲ್ಲಿಯ ಬಸವ ಕಾಯಕ-ದಾಸೋಹ (ಬಿಕೆಡಿ) ಫೌಂಡೇಷನ್ ವತಿಯಿಂದ ವೃತ್ತಿಪರ ಕೋಸ್೯ ಆಯ್ಕೆಯಾದ ಮೂವರು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒಟ್ಟು 30 ಸಾವಿರ ರೂ. ಸಹಾಯ ಧನ ವಿತರಿಸಲಾಗಿದೆ.

ಸರ್ಕಾರಿ ಕೋಟಾದಡಿ ವೈದ್ಯಕೀಯ ಕೋಸ್೯ ಆಯ್ಕೆಯಾದ ಗಾಂಧಿಗಂಜ್ ನಲ್ಲಿ ಹಮಾಲರಾಗಿರುವ ಈಶ್ವರಯ್ಯ ಸ್ವಾಮಿ ಅವರ ಪುತ್ರ ಅರುಣಕುಮಾರ, ಹುಮನಾಬಾದ್ ನ ಲಾರಿ ಚಾಲಕ ವಿಠ್ಠಲರಾವ್ ಬೆಲ್ಲಾಳೆ ಪುತ್ರ ಸಾಯಿನಾಥ ಹಾಗೂ ಪಶು ವೈದ್ಯ ಓದುತ್ತಿರುವ ಆಮೇರ್ ಸೋಹೆಲ್ ಅವರಿಗೆ ತಲಾ 10 ಸಾವಿರ ರೂ. ಸಹಾಯ ಧನದ ಚೆಕ್ ಯುವ ಉದ್ಯಮಿ, ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಅವರು ವಿತರಿಸಿದರು.

ಫೌಂಡೇಷನ್ ನಿಂದ ಪ್ರತಿ ವರ್ಷ ವೃತ್ತಿಪರ ಕೋಸ್೯ ಆಯ್ಕೆಯಾಗುವ ಕಡು ಬಡತನ ಹಿನ್ನೆಲೆಯ ಜಿಲ್ಲೆಯ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಗೆ 25 ಸಾವಿರ ರೂ. ಸಹಾಯ ಧನ ನೀಡಲಾಗುತ್ತಿದೆ. ಪ್ರಸಕ್ತ ಮೂವರಿಗೆ ತಲಾ 10 ಸಾವಿರ ನೆರವು ಕಲ್ಪಿಸಲಾಗಿದೆ. ಜಿಲ್ಲೆಯ ಅನೇಕ ಬಡ ವಿದ್ಯಾರ್ಥಿಗಳು ನಾನಾ ವೃತ್ತಿಪರ ಕೋಸ್೯ಗಳಿಗೆ ಆಯ್ಕೆ ಆಗುತ್ತಿರುವುದು ಸಂತಸದ ಸಂಗತಿ. ಉತ್ತಮ ಅಂಕ ಗಳಿಸಿ ವೃತ್ತಿ ಪರ ಕೋಸ್೯ ಆಯ್ಕೆಯಾದರೂ ಶುಲ್ಕ ಭರಿಸಲು ಕಷ್ಟಪಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಜಾತಿ, ಮತ, ಪಂಥದ ಭೇದಭಾವವಿಲ್ಲದೆ ಸಹಾಯ ಧನ ಕಲ್ಪಿಸಿ ನೆರವಾಗುವ ಕೆಲಸ ಫೌಂಡೇಷನ್ ಮಾಡುತ್ತಿದೆ. ಬರುವ ದಿನಗಳಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳು ನಡೆಸಲು ಉದ್ದೇಶಿಸಲಾಗಿದೆ ಎಂದು ಧನ್ನೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net