

ಅಫಜಲಪುರ: ಬೆಲೆ ಏರಿಕೆಯ ದಿನಗಳಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ದುರ್ಬಲರಿಗೆ ಅನುಕೂಲವಾಗಲೆಂದು ರಾಜ್ಯ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಟೀನ್ ಮೂಲಕ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆಹಾರ ನೀಡುತ್ತಿದೆ. ಇದರೊಂದಿಗೆ ಹಸಿವು ನೀಗಿಸುವ ದೊಡ್ಡ ಕೆಲಸ ಮಾಡುತ್ತಿದೆ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಗುತ್ತಿಗೆದಾರರು ಮಾರ್ಗಸೂಚಿಯಂತೆ ಗುಣಮಟ್ಟದ ಆಹಾರ ನೀಡಬೇಕು. ಕ್ಯಾಂಟೀನ್‌ಗೆ ಬರುವ ಪ್ರತಿಯೊಬ್ಬರಿಗೂ ಆಹಾರದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಪುರಸಭೆ ಅಧ್ಯಕ್ಷೆ ಸುಹಾಸಿನಿ ಖೇಳಗಿ, ಉಪಾಧ್ಯಕ್ಷ ಶಿವು ಪದಕಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ, ತಹಸೀಲ್ದಾರ್ ಸಂಜೀವಕುಮಾರ ದಾಸರ, ಯೋಜನಾ ನಿರ್ದೇಶಕ ಮುನಾವರ್ ದೌಲಾ, ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಪ್ರಮುಖರಾದ ಮತೀನ್ ಪಟೇಲ್, ಶಿವಾನಂದ ಗಾಡಿಸಾಹುಕಾರ, ಚಂದು ದೇಸಾಯಿ, ರಮೇಶ ಪೂಜಾರಿ, ನಾನಾಗೌಡ ಪಾಟೀಲ್, ಶರಣು ಕುಂಬಾರ, ಸೈಫನಸಾಬ್ ಚಿಕ್ಕಳಗಿ, ಅಂಬರೀಶ ಬುರಲಿ, ರಾಜಶೇಖರ ಪಾಟೀಲ್, ಸಂತೋಷ ಚಲವಾದಿ, ಅಜಯ, ಸಂತೋಷ ಚಲವಾದಿ, ಪ್ರವೀಣ ಕಲ್ಲೂರ್ ಇತರರಿದ್ದರು.
೧೦ ದಿನದಲ್ಲಿ ಕಾಮಗಾರಿ ಮುಗಿಸಿ: ಅಫಜಲಪುರದಲ್ಲಿ ನಗರೋತ್ಥಾನ ೪ನೇ ಹಂತದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ, ಚರಂಡಿ, ರಸ್ತೆ ವಿಭಜಕ, ಬೀದಿ ದೀಪ ಕಾಮಗಾರಿಯೂ ಗುಣಮಟ್ಟದ ಜತೆಗೆ ೧೦ ದಿನಗಳಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಇದಕ್ಕೆ ಸಂಬAಧಪಟ್ಟವರನ್ನು ಅಮಾನತು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಎಚ್ಚರಿಕೆ ನೀಡಿದರು.