ಬಡ ಕುಟುಂಬಗಳಿಗೆ ದಿನಸಿ ವಿತರಣೆ

KLB PAPA 01
Published on

ಕಲಬುರಗಿ: ಕರೊನಾ ಹಿನ್ನೆಲೆಯಲ್ಲಿ ಉದ್ಯೋಗ ಇಲ್ಲದೆ, ಬಡತನ ಎದುರಿಸಲಾಗದೆ ಸಂಕಷ್ಟದಲ್ಲಿರುವ ಬಡ ಜನತೆಗೆ ಕೆಲವು ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಜಿ-99 ಮತ್ತು ಜಿ-55 ಸಂಸ್ಥೆಗಳು ಮಾನವೀಯತೆ ಮೆರೆದಿವೆ. ಲಾಕ್ಡೌನ್ ಅಂತ್ಯವಾಗುವವರೆಗೆ ತಮ್ಮ ಈ ಸೇವೆ ಮುಂದುವರಿಯಲಿದೆ ಎಂದು ಸಂಸ್ಥೆ ಮುಖ್ಯಸ್ಥರಲ್ಲಿ ಒಬ್ಬರಾಗಿರುವ ಶರಣು ಪಪ್ಪಾ ತಿಳಿಸಿದ್ದಾರೆ.
ಪ್ರತಿನಿತ್ಯ 40-50 ಕುಟುಂಬಗಳಿಗೆ ಅಗತ್ಯ ವಸ್ತು ಪೂರೈಕೆ ಜತೆಗೆ ನಿರ್ಗತಿಕರಿಗೆ, ಭಿಕ್ಷುಕರಿಗೆ, ಕೂಲಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ನಮ್ಮ ರಕ್ಷಣೆಯಲ್ಲಿ ತೊಡಗಿರುವ ಕೆಲವು ಪೊಲೀಸ್ ಸಿಬ್ಬಂದಿಗೂ ಊಟ ಕೊಡಲಾಗುತ್ತಿದೆ. ಇದುವರೆಗೆ 300ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರಧಾನ್ಯ ಒದಗಿಸಲಾಗಿದೆ. ಪ್ರತಿ ವ್ಯಕ್ತಿಗೆ 1 ಪ್ಯಾಕೇಟ್ ಒಳ್ಳೆಣ್ಣೆ, 1 ಕೆಜಿ ಸಕ್ಕರೆ, 3 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ, 1 ಕೆಜಿ ಅವಲಕ್ಕಿ, 2 ಕೆಜಿ ರವಾ ಪ್ಯಾಕೇಟ್ ನೀಡಲಾಗುತ್ತಿದೆ.
ಶರಣಪ್ಪ ಬುಳ್ಳಾ, ಪ್ರಶಾಂತ ಗುಡ್ಡಾ, ಶರಣು ಮತ್ತಿಮೂಡ, ಶಿವರಾಜ ಖೂಬಾ, ಶರಣು ಬಾಗೋಡಿ, ಮಲ್ಲಿಕಾರ್ಜುನ ಹಾಲಪ್ಪ, ಬಸವರಾಜ ಘತ್ತರಗಿ, ಮಲ್ಲಿಕಾರ್ಜುನ ನಾಗೂರ, ಶಿವಶಂಕರ ಐನಾಪುರ, ಲೋಕನಾಥ ಕುಲಕರ್ಣಿ , ನಿಜಲಿಂಗಮೂರ್ತಿ ಅಕ್ಕಿಮಠ, ಅನೀಲ್ ತೆಗನೂರ ಅವರನ್ನು ಒಳಗೊಂಡ ತಂಡ ಸೇವಾ ಕೈಂಕರ್ಯದಲ್ಲಿ ತೊಡಗಿದೆ.

ಜಿ-99 ಮತ್ತು ಜಿ-55 ಜನಸೇವೆ ಮಾಡುವ ಸಂಸ್ಥೆಗಳು. ಮೊದಲಿನಿಂದಲೂ ಒಂದಿಲ್ಲೊಂದು ಸೇವೆ ಮಾಡುತ್ತಲೇ ಬರುತ್ತಿವೆ. ಅನೇಕ ವಿದ್ಯಾರ್ಥಿಗಳ ಶುಲ್ಕ ಕಟ್ಟಿವೆ. ಈಗ ಕರೊನಾ ಹಿನ್ನೆಲೆಯಲ್ಲಿ ಬಡ ಕುಟುಂಬಗಳ ಸಂಕಷ್ಟಕ್ಕೆ ನೆರವಾಗುವ ಅಗತ್ಯ ಇದ್ದುದ್ದರಿಂದ ಈ ಸೇವೆ ಕೈಗೊಳ್ಳಲಾಗಿದೆ.
| ಶರಣು ಪಪ್ಪಾ
ಜಿ-99 ಸಂಸ್ಥೆ ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net