ಬಡ ಕಾರ್ವಿುಕರಿಗೆ ಉದ್ಯೋಗ ಕೊಡಿ

12MDG1
Published on

ಮುಂಡರಗಿ: ತಾಲೂಕಿನ ಕಪ್ಪತಗುಡ್ಡದ ಸುಜಲಾನ್ ಕಂಪನಿಯ ಪವನ ವಿದ್ಯುತ್ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿಯ 10ತಿಂಗಳ ಬಾಕಿ ವೇತನ ನೀಡುವುದು ಹಾಗೂ ಸಿಬ್ಬಂದಿಯನ್ನು ಕೆಲಸದಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಭದ್ರತಾ ಸಿಬ್ಬಂದಿ ಕುಟುಂಬ ಸಮೇತ ತಹಸೀಲ್ದಾರ್ ಕಚೇರಿ ಮುಂದೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ ಹದಿನಾರನೇ ದಿನ ಪೂರೈಸಿತು.

ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ಸುಜಲಾನ್ ಕಂಪನಿಯವರು ಬಡ ಕಾರ್ವಿುಕರನ್ನು ಕೆಲಸದಿಂದ ಬಿಡಿಸುವುದು ಹಾಗೂ ವೇತನ ಬಾಕಿ ಉಳಿಸಿಕೊಂಡಿರುವುದು ಖಂಡನೀಯ. 8-10ದಿನದೊಳಗೆ ಸಮಸ್ಯೆಗೆ ಸ್ಪಂದಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.

ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ನಿರಂತರ ಧರಣಿ ನಡೆಸಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಲಕ್ಷ್ಮಣ ಬನ್ನಿಕೊಪ್ಪ, ವೀರೇಶ ರಾಹುತೂರ, ಪ್ರಕಾಶ ದಂಡಿನ, ಕೆ.ಎಂ. ಮುಂಡರಗಿ, ಖಾಜಾಬಿ ಖತೀಬ, ವೆಂಕಪ್ಪ ಯಕ್ಲಾಸಪುರ, ಡಿ.ಎಚ್. ಬನ್ನಿಕೊಪ್ಪ, ಮಾರುತಿ ಬೇವಿನಕಟ್ಟಿ, ರಾಮಣ್ಣ ಸೊರಟೂರ, ಎಸ್.ಎ. ಮಕ್ಕಾಬಿ, ಲಕ್ಷ್ಮವ್ವ ಬಳಿಗೇರ, ಲಕ್ಷ್ಮವ್ವ ಬೇವಿನಕಟ್ಟಿ, ರೇಣವ್ವ ಜಾಲವಾಡಗಿ, ನೀಲವ್ವ ಲಮಾಣಿ, ಶಿವಪುತ್ರಪ್ಪ ರೇವಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net