ಬಡ ಒಂಟಿ ಜೀವಗಳಿಗೆ ವಾತ್ಸಲ್ಯ ಕಿಟ್

1412KLB01
Published on

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತೀರಾ ಕಡುಬಡತನದಿಂದ ಒಂಟಿಯಾಗಿ ಜೀವಿಸುತ್ತಿರುವ ದುಡಿಯಲು ಸಾಮರ್ಥ್ಯ ಇಲ್ಲದ ರಾಜಾಪುರದ ಕೊಳ್ಳುಬಾಯಿ, ಗುರುಬಾಯಿ, ಅಂಬಮ್ಮ ಅವರಿಗೆ ವಾತ್ಸಲ್ಯ ಕಿಟ್‌ನ್ನು ವಿತರಿಸಲಾಯಿತು.

ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವರಾಜ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಅಗತ್ಯ ಇರುವವರಿಗೆ ಸೂಕ್ತ ನೆರವು ನೀಡುತ್ತಿದ್ದು, ಅದನ್ನು ಸಮರ್ಪಕವಾಗಿ ತಲುಪಿಸುತ್ತಿದೆ ಎಂದು ಹೇಳಿದರು.

ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಗಣಪತಿ ಮಾಳಟ ಮಾತನಾಡಿ, ಫಲಾನುಭವಿಗಳಿಗೆ ಪ್ರತಿ ತಿಂಗಳು ೧೦೦೦ ರೂ. ಮಾಸಾಶನ ನೀಡಲಾಗುತ್ತದೆ. ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮಾಸಾಶನ ಪಡೆಯುವ ಫಲನುಭವಿಗಳಿಗೆ ನಿತ್ಯ ಜೀವನಕ್ಕೆ ಬೇಕಾಗುವ ಬಟ್ಟೆ, ತಲೆ ದಿಂಬು, ಪಾತ್ರೆ, ಸಾಬೂನು, ವಾತ್ಸಲ್ಯ ಮಿಕ್ಸಿ, ನೀರಿನ ದಿಂಬಿಗೆ, ಶಾಲು, ಸೀರೆ ಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ ಎಂದು ಹೇಳಿದರು.

ಕ್ಷೇತ್ರ ಯೋಜನಾಧಿಕಾರಿ ರಿಯಾಜ್ ಅತ್ತರ, ವಲಯ ಮೇಲ್ವಿಚಾರಕ ಬೀಸಯ್ಯ, ಸೇವಾ ಪ್ರತಿನಿಧಿ ದಿವ್ಯಾ ಭಾರತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net