ಬಟ್ಟೆ ಬ್ಯಾಗ್ ವಿತರಣೆ

CTD 9 BATTE BAG--000003
Published on

ಚಿತ್ರದುರ್ಗ:ನಗರದ ಜೆಸಿಆರ್ ಮತ್ತು ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದಿಂದ ಜೆಸಿಆರ್,ವಿಪಿ ಬಡಾವಣೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಅನಾಹುತಗಳೆಡೆ ಮಂಗಳವಾರ ಜಾಗೃತಿ ಮೂಡಿಸಲಾಯಿತು. ಅತಿಯಾಗುತ್ತಿರುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕಿದೆ ಎಂದು ಸಂ ಘದ ಪ್ರಮುಖರು ನಾಗರಿಕರಿಗೆ ಮನವಿ ಮಾಡಿದರು. ಈ ವೇಳೆ ಉಚಿತವಾಗಿ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಲಾಯಿತು. ನಗರಸಭೆ ಸದಸ್ಯೆ ರೋಹಿಣಿ,ಕೃಷ್ಣಮೂರ್ತಿ,ಮುರುಗೇಶ್‌ಗೌಡ್ರು,ನವೀನ್‌ಚಾಲಕ್ಯ,ಎಸ್.ಜಿ.ಸುರೇಶ್‌ಬಾಬು,ಕಲಾ,ಶೈಲಾ ವಿಶ್ವನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net