ಬಜೆಟ್‌ನಲ್ಲಿ ಕೈಗಾರಿಕೆ, ಕೃಷಿಗೆ ಒತ್ತು

CTD U.PRASANNA---
Published on

ಚಿತ್ರದುರ್ಗ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕೈಗಾರಿಕೆ, ಕೃಷಿ ಮತ್ತು ಮೀನುಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸಿರಿಗೆರೆಯ ಆರ್ಥಿಕ ಸನ್ನದು ಗುರಿಯೋಜಕ ಯು. ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ. ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ಗಳಿಗೆ ಏರಿಸಿದ್ದರ ಪರಿಣಾಮ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಸಹಾಯವಾಗಲಿದೆ.

ಜಾಗತಿಕ ಬಿಕ್ಕಟ್ಟು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಮೌಲ್ಯ ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಆದಾಯ ತೆರಿಗೆ ಮಿತಿ ಏ ರಿಕೆಯಿಂದ ನೇರ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಬಹುದು. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ ಸಾಲ ಮಿತಿ ಹೆಚ್ಚಿಸಿರುವುದು ಸ್ವಾಗತಾರ್ಹ. ದೇಶದ ತಲಾದಾಯ ಹೆಚ್ಚಾಗುವ ನಿರೀಕ್ಷೆ ಇದೆ. ವೈಯಕ್ತಿಕವಾಗಿ ಕೊಳ್ಳುವಿಕೆ ಹೆಚ್ಚಾದರೆ ತೆರಿಗೆ ಕೊರತೆ ಪರೋಕ್ಷವಾಗಿ ಸರಿದೂಗಿಸಬಹುದಾಗಿದೆ. ಇದೊಂದು ಉತ್ತಮ ಬಜೆಟ್ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net