ಬಜೆಟ್‌ನಲ್ಲಿ ಕಲ್ಯಾಣಕ್ಕೆ ಶೇ.೨೦ ಹಣ ಮೀಸಲಿಡಿ

Amarnath C Patil
Published on

ಕಲಬುರಗಿ: ರಾಜ್ಯದ ೨೦೨೫-೨೬ನೇ ಸಾಲಿನ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಪ್ರಗತಿ, ೩೭೧ (ಜೆ) ಮೀಸಲು ಜಾತಿ, ಪ್ರಾದೇಶಿಕ ಅಸಮತೋಲನ ನೀಗಿಸಲು ಬಜೆಟ್‌ನ ಶೇ.೨೦ ನಿಗದಿಪಡಿಸಬೇಕು ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ್ ಮನವಿ ಮಾಡಿದ್ದಾರೆ. ಕೆಕೆಆರ್‌ಡಿಬಿ ಅನುದಾನ ಹೆಚ್ಚಿಸಿ, ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು, ಜವಳಿ ಪಾರ್ಕ್ ಸ್ಥಾಪನೆಗೆ ಶಕ್ತಿ ತುಂಬಬೇಕು, ಅಫಜಲಪುರ, ಜೇವರ್ಗಿಗೆ ಕಲಬುರಗಿ ಮೂಲಕ ಸೂರತ್ ಚೆನ್ನೆÊ ಎಕ್ಸ್ಪ್ರೆಸ್ ವೇಗೆ ಸಂಪರ್ಕಿಸುವ ರಸ್ತೆ ಆರು ಪಥಕ್ಕೆ ಹೆಚ್ಚಿಸಬೇಕು, ಕೌಶಲ ಅಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು, ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಕಲಬುರಗಿಗೆಗೆ ಸುಸ್ಥಿರ ಕುಡಿಯುವ ನೀರಿನ ಸೌಲಭ್ಯ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಪತ್ರ ಬರೆದಿದ್ದಾರೆ. ವಿಶೇಷ ಆರ್ಥಿಕ ವಲಯ ಅಭಿವೃದ್ಧಿಪಡಿಸಬೇಕು, ಎಪಿಎಂಸಿ ಮಾರುಕಟ್ಟೆ ಸೆಸ್ ೬೦ ಪೈಸೆಯಿಂದ ೩೦ ಪೈಸೆಗೆ ಪರಿಷ್ಕರಿಸಬೇಕು ಎಂಬುದು ಸೇರಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಯೋಜನೆಗಳ ಜಾರಿಗೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net