ಬಜೆಟ್ ಮಂಡನೆಗೆ ಮೈಸೂರಿನಲ್ಲಿ ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ

29
Published on

ಮೈಸೂರು: ಹದಿನಾಲ್ಕನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿದ್ದಲ್ಲದೆ, ಸಿಹಿ ಹಂಚಿ ಜೈಕಾರದ ಘೋಷಣೆ ಕೂಗಿದರು.
ನಗರದ ನಂಜುಮಳಿಗೆ ವೃತ್ತದಲ್ಲಿ ಜಮಾಯಿಸಿದ ಸಿದ್ದರಾಮಯ್ಯ ಅಭಿಮಾನಿ ಬಳಗದವರು, ಬಜೆಟ್‌ನಲ್ಲಿ ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ, ಚಿತ್ರನಗರಿ ಸ್ಥಾಪನೆ, ವಸ್ತುಪ್ರದರ್ಶನ ಮೇಲ್ದರ್ಜೆಗೇರಿಸುವುದು ಸೇರಿದಂತೆ ಇನ್ನಿತರ ಕೊಡುಗೆಗಳನ್ನು ಜಿಲ್ಲೆಗೆ ನೀಡುವ ಮೂಲಕ ಸಿದ್ದರಾಮಯ್ಯ ಅವರು ತವರು ಪ್ರೀತಿ ತೋರಿದ್ದಾರೆ ಎಂದು ಬಣ್ಣಿಸಿದರು.
ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ಮಾತನಾಡಿ, ಮೈಸೂರು ನಗರಕ್ಕೆ ಹೆಚ್ಚು ಒತ್ತು ನೀಡಿದ್ದು, ಅದರಲ್ಲೂ ನಾಡಿನ ಅಧಿದೇವತೆ ಇರುವ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ನಿಜಕ್ಕೂ ಸಂತೋಷವಾಗುತ್ತಿದೆ. ರಾಜ್ಯ, ಹೊರ ರಾಜ್ಯದಿಂದ ಬರುವ ಭಕ್ತರಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಬಳಗದ ಲೋಕೇಶ್, ಮೋಹನ್‌ಕುಮಾರ್, ನವೀನ್ ಕೆಂಪಿ, ರವಿಚಂದ್ರ, ರಾಜೇಶ್, ರಾಕೇಶ್, ಮಂಜು, ತೀರ್ಥಕುಮಾರ್, ಕನಕಮೂರ್ತಿ ಹಡಜನ, ಎಸ್.ಎನ್.ರಾಜೇಶ್, ಮಂಜಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net