ಬಜೆಟ್ ನಲ್ಲಿ ಬಿಸಿಲೂರಿಗೆ ಫುಡ್ ಪಾರ್ಕ್ ಗಿಫ್ಟ್: ಎಂ.ಬಿ‌. ಪಾಟೀಲ ಬೇಡಿಕೆಗೆ ಸಿಕ್ಕ ಮನ್ನಣೆ

facebook_1615186734457_6774584181081920041
Published on

ವಿಜಯಪುರ: ಬಿಸಿಲೂರು ಖ್ಯಾತಿಯ ವಿಜಯಪುರ ಜಿಲ್ಲೆಗೆ 2021 ನೇ ಬಜೆಟ್ ನಲ್ಲಿ ಫುಡ್ ಪಾರ್ಕ್ ನಿರ್ಮಾಣದ ಘೋಷಣೆ ಮೂಲಕ ಸಿಎಂ ಯಡಿಯೂರಪ್ಪ ಮಾಜಿ ಸಚಿವ ಶಾಸಕ ಎಂ.ಬಿ. ಪಾಟೀಲರ ಕೋರಿಕೆಗೆ ಕೊನೆಗೂ ಮನ್ನಣೆ ನೀಡಿದ್ದಾರೆ.

ಇಲ್ಲಿನ ಇಟ್ಟಂಗಿಹಾಳದಲ್ಲಿ ಫುಡ್ ಪಾರ್ಕ್ ನಿರ್ಮಿಸಲು ಬಜೆಟ್ ನಲ್ಲಿ ಆದ್ಯತೆ ನೀಡುವುದಾಗಿ ಕೃಷಿ ಸಚಿವ ಸಿ.ಸಿ. ಪಾಟೀಲ ಈಚೆಗಷ್ಟೆ ಭರವಸೆ ನೀಡಿದ್ದರು. ಫುಡ್ ಪಾರ್ಕ್ ನಿರ್ಮಾಣಕ್ಕೆ

ಸುಮಾರು 200 ಎಕರೆಗೂ ಅಧಿಕ ಜಾಗೆ ಮೀಸಲಿದ್ದು, ಈಚೆಗಷ್ಟೆ ಸಚಿವ. ಬಿ.ಸಿ. ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು.

ಎಂ.ಬಿ. ಪಾಟೀಲರ ಪತ್ರ‌ ಆಧರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬಜೆಟ್ ನಲ್ಲಿ ಅನುದಾನ ಮೀಸಲಿಡಲು ಯಡಿಯೂರಪ್ಪ ಅವರ ಗಮನಕ್ಕೆ ತರುವುದಾಗಿ ಬಿ.ಸಿ. ಪಾಟೀಲ ತಿಳಿಸಿದ್ದರು. ಇದೀಗ ಆ ಬೇಡಿಕೆ ಈಡೇರಿದ್ದು ಗುಮ್ಮಟ ನಗರಿಗೆ ಮತ್ತೊಂದು ಕಿರೀಟ ಸಿಕ್ಕಂತಾಗಿದೆ. ಸದರಿ ಪಾರ್ಕ್ ನಿರ್ಮಾಣದಿಂದಾಗಿ

ಉದ್ಯೋಗವಕಾಶಗಳು ಹೆಚ್ಚಲಿವೆ. ತೋಟಗಾರಿಕೆ ಬೆಳೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net