ಬಜಾಜ್ ಸಿಎನ್‌ಜಿ ಬೈಕ್ ಬಿಡುಗಡೆ

03
Published on

ಬೆಳಗಾವಿ: ನಗರದ ಜಗಶ್ರೀ ಬಜಾಜ್ ಶೋ ರೂಮ್‌ನಲ್ಲಿ ಶನಿವಾರ ಬಜಾಜ್ ಫ್ರೀಡಂ 125, ಸಿಎನ್‌ಜಿ ಬೈಕ್ ಬಿಡುಗಡೆಗೊಳಿಸಲಾಯಿತು. ಜಗತ್ತಿನ ಮೊದಲ ಸಿಎನ್‌ಜಿ ಬೈಕ್ ಇದಾಗಿದ್ದು, ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಶಾಸಕ ಅಭಯ ಪಾಟೀಲ, ಉಪಮೇಯರ್ ಆನಂದ ಚೌವ್ಹಾಣ, ಬೆಳಗಾವಿ ಪೆಟ್ರೋಲಿಯಂ ಡೀಲರ್ ಅಸೋಸಿಯೇಶನ್ ಅಧ್ಯಕ್ಷ ರಾಜದೀಪ ಕೌಜಲಗಿ ಅತಿಥಿಗಳಾಗಿ ಪಾಲ್ಗೊಂಡು ವಿನೂತನ ಬೈಕ್ ಬಿಡುಗಡೆಗೊಳಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಶೋ ರೂಮ್‌ನ ಡೀಲರ್ ಪ್ರಿನ್ಸಿಪಾಲ್ ಕಿರಣ ಕುಡಚಿ, ಏರಿಯಾ ಮ್ಯಾನೇಜರ್ ಅಶ್ವಿನ್ ಜಯಗೌಡ, ವರ್ಕಶಾಪ್ ಮ್ಯಾನೇಜರ್ ನಿಖಿಲ್ ಚೌಗಲೆ ಹಾಗೂ ಶೋ ರೂಮ್‌ನ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net