

ಅರಸೀಕೆರೆ: ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರ ಭೂಮಿಗೆ ಸರ್ಕಾರ ಕೂಡಲೇ ಮಂಜೂರಾತಿ ಪತ್ರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ರೈತ ಮುಖಂಡರು ಆಯೋಜಿಸಿದ್ದ ಬೃಹತ್ ಪಾದಯಾತ್ರೆ ಬುಧವಾರ ಮಧ್ಯಾಹ್ನ ಬೆಂಗಳೂರು ತಲುಪಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಲಿಖಿತ ಮನವಿ ಸಲ್ಲಿಸಿದೆ.
ಸಂಘದ ರಾಜ್ಯ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ,ಅರಸೀಕೆರೆ ಹಾಗೂ ಬೇಲೂರು ತಾಲೂಕಿನ ವಿವಿಧೆಡೆ ಅಂದಾಜು 2580 ಎಕರೆ ಸರ್ಕಾರಿ ಭೂಮಿಯನ್ನು ಕಳೆದ ಹತ್ತಾರು ವರ್ಷಗಳಿಂದ ರೈತರು ಬುಗರ್ ಹುಕ್ಕುಂ ಸಾಗುವಳಿಯಡಿ ಭೂಮಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ.ಇವರಿಗೆ ಸ್ವಂತ ಜಮೀನು ಇಲ್ಲದ ಕಾರಣ ರಾಜ್ಯ ಸರ್ಕಾರ ಭೂ ಮಂಜೂರಾತಿಗೆ ಆದೇಶ ನೀಡುವ ಮೂಲಕ ಬಡ ರೈತರ ಜೀವನಕ್ಕೆ ದಾರಿ ಮಾಡಿಕೊಡಬೇಕು.ಈ ಸಂಬಂಧ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದಲೇ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ ಸಿಎಂ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು ಸಕಾರಾತ್ಮ ಸ್ಪಂದನೆ ದೊರೆತಿದೆ ಎಂದು ಪತ್ರಿಕೆಗೆಮಾಹಿತಿ ನೀಡಿದ್ದಾರೆ.
ರೈತ ಸಂಘದ ಗೌರವ ಅಧ್ಯಕ್ಷ ಜವನಹಳ್ಳಿ ನಿಂಗಪ್ಪ , ಜಿಲ್ಲಾ ಸಂಚಾಲಕ ಅಯೂಬ್ ಪಾಷ, ಜಿಲ್ಲಾ ಕಾರ್ಯಧ್ಯಕ್ಷ ಎಜಾಜ್ ಪಾಷಾ, ಬಾಣಾವಾರ ಬೀರಪ್ಪ, ಮೊಹಮ್ಮದ್ ದಸ್ತಗೀರ್,ಕುಶಾಲ್ ಕುಮಾರ್, ಶಾಂತಕುಮಾರ್, ರೋಷನ್. ರಮೇಶ್ ,ಬೇಲೂರು ಮಂಜುನಾಥ್ ,ಹನುಮಂತು,ವಕೀಲ ವೆಂಕಟೇಶ್,ರಂಗಸ್ವಾಮಿ,ರಾಮಚಂದ್ರು ಹಾಗೂ ಇನ್ನಿತರರು ಪಾದಯಾತ್ರಯಲ್ಲಿ ಬೆಂಗಳೂರಿಗೆ ತೆರಳಿದ್ದರು.