ಬಗರ್​ ಹುಕುಂ ಅರ್ಜಿ ವಿಲೇವಾರಿ ಮಾಡಿ

16 04
Published on

ಪಾವಗಡ: ತಾಲೂಕಿನ ನಾಲ್ಕು ಹೋಬಳಿಗಳಲ್ಲಿ 40 ವರ್ಷದಿಂದ ಸರ್ಕಾರಿ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸುತ್ತಾ ಬದುಕು ಸಾಗಿಸುತ್ತಿರುವ ನೂರಾರು ಬಡ ರೈತರು ಬಗರ್​ ಹುಕುಂ ಅರ್ಜಿಗಳನ್ನು ಸಲ್ಲಿಸಿದರೂ ಕೂಡ ಅಧಿಕಾರಿಗಳಿಂದ ಸ್ಪಂದನೆ ಇಲ್ಲಾ, ಅರ್ಜಿಗಳನ್ನು ಪರಿಶೀಲಿಸಿ, ಅಕ್ರಮ ಸಕ್ರಮದಡಿ ರೈತರಿಗೆ ಖಾತೆ ಪಹಣಿ ನೀಡುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಫೂಜಾರಪ್ಲ ಆಗ್ರಹಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಬಗರ್​ ಹುಕುಂ ಅರ್ಜಿದಾರರಿಗೆ ಖಾತೆ ಪಹಣಿ ನೀಡುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಹಸೀಲ್ದಾರ್​ ಡಿ.ಎನ್​.ವರದರಾಜುಗೆ ಮನವಿ ಸಲ್ಲಿಸಿ ಮಾತನಾಡಿದರು.

ತಾಲೂಕಿನಾದ್ಯಂತ ಅನೇಕ ಬಡ ರೈತರು ಹಾಗೂ ನಿರ್ಗತಿಕರು ಜಮೀನಿಲ್ಲದೆ ಸುಮಾರು 40 ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ರೈತ ಕುಟುಂಬಗಳು ಉಳುಮೆ ಮಾಡಿಕೊಂಡು ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದಾರೆ. 40 ವರ್ಷಗಳಿಂದಲೂ ಬಗುರ್​ ಹುಕುಂ ಅರ್ಜಿಗಳನ್ನು ಹಾಕಿಕೊಂಡು ಜೀವನ ಮಾಡಿಕೊಳ್ಳುತ್ತಾರೆ. ಇದುವರೆಗೂ ಬಗುರ್​ ಹುಕುಂ ಯೋಜನೆಯಡಿಯಲ್ಲಿ ಕಡು ಬಡ ರೈತರಿಗೆ ಖಾತೆ ಪಹಣಿ ಮಾಡಿಕೊಡದೆ ಅಲೆದಾಡಿಸುವುದರ ಜತೆಗೆ ಅರ್ಜಿಗಳನ್ನು ವಜಗೊಳಿಸಲಾಗುತ್ತಿದೆ. ಈ ಬಗ್ಗೆ ಕಾರಣವೂ ನೀಡುತಿಲ್ಲಾ. ಅಲ್ಲದೆ ರೈತರ ಬಳಿ ಬಗರ್​ ಹುಕ್ಕುಂ ಜಮೀನು ಮಾಡಿಕೊಡಲು ಗ್ರಾಮ ಲೆಕ್ಕಿಗರು ಸಾವಿರಾರು ರೂ.ಲಂಚ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಸರ್ಕಾರ ಸ್ಪಂದಿಸದಿದ್ದರೆ ಆಂದೋಲನ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net