ಬಂದ್ ಗಲಾಟೆ, ಕಿಡಿಗೇಡಿಗಳ ವಿರುದ್ಧ ಕೇಸ್

DSC_4106
Published on

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ನಗರದಲ್ಲಿ ಮಂಗಳವಾರ ಕರೆ ನೀಡಿದ್ದ ಬಂದ್ ವೇಳೆ ನಡೆದ ಗಲಾಟೆಗೆ ಸಂಬAಧಿಸಿದAತೆ ಎರಡು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಶಹಾಬಜಾರ್‌ನಲ್ಲಿನ ಅಂಚೆ ಕಚೇರಿ ಮೇಲೆ ದಾಳಿ ನಡೆಸಿ, ಶೆಟರ್ ಮುಚ್ಚಿಸಿ ಖುರ್ಚಿ ಬಿಸಾಡಿ, ಬಡಿಗೆಗಳಿಂದ ಶೆಟರ್‌ಗೆ ಹೊಡೆದು ಕರ್ತವ್ಯಕ್ಕೆ ಅಡಿಪಡಿಸಿದ ಆರೋಪದ ಅಪರಿಚಿತ ಆರು ಆರೋಪಿಗಳ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಸ್ಟರ್ ಮಾಸ್ಟರ್ ರಮೇಶ ಹದನೂರಕರ್ ದೂರು ನೀಡಿದ್ದಾರೆ.

ಲಾರಿ ಗಾಜು ಪುಡಿ ಮಾಡಿದವರ ವಿರುದ್ಧ ಕೇಸ್: ಮಂಗಳವಾರ ನಡೆದ ಬಂದ್ ವೇಳೆ ಬೇಲೂರ ಕ್ರಾಸ್ ಬಳಿ ಸಂಚರಿಸುತ್ತಿದ್ದ ಲಾರಿಗೆ ಅಕ್ರಮ ಕೂಟ ರಚಿಸಿಕೊಂಡು ಬಡಿಗೆಗಳಿಂದ ಹೊಡೆದು, ಗಾಜು ಪುಡಿ ಪುಡಿ ಮಾಡಿದ ಮೂವರ ವಿರುದ್ಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಭಿ ಸೈದಪ್ಪ, ರಾಹುಲ್ ಮರೆಪ್ಪ, ಸಿದ್ದು ಚಿರಂಜೀವಿ, ಆದಿತ್ಯಾ ಬಸವರಾಜ, ಈಶ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ದಲಿತಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಕುರಿತು ಜಿಲ್ಲಾಧಿಕಾರಿ ಪೂರ್ವಭಾವಿ ಸಭೆ ಕರೆದು, ಶಾಂತಿಯುತ ಬಂದ್ ಮಾಡಬೇಕು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಬಾರದು. ಒತ್ತಾಯಪೂರ್ವಕ ಬಂದ್ ಮಾಡದಂತೆ ಸೂಚಿಸಿದ್ದರು. ಆದರೂ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ, ೧೦ ರಿಂದ ೧೨ ಜನ ಅಕ್ರಮ ಕೂಟ ರಚಿಸಿಕೊಂಡು ಬಂದು ವಾಹನಗಳಿಗೆ ತೊಂದರೆ ಕೊಡುವುದು ಮಾಡಿದ್ದಾರೆ. ಲಾರಿಯ ಗಾಜಿಗೆ ಬಡಿಗೆಯಿಂದ ಹೊಡೆದು ಹಾನಿ ಪಡಿಸಿದ್ದಾರೆ ಎಂಬ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net