

ಅರಸೀಕೆರೆ: ಕನಕದಾಸರ ತತ್ವಾದರ್ಶ, ಚಿಂತನೆಗಳು ಮನುಕುಲದ ಏಳಿಗೆಗೆ ಆದರ್ಶಪ್ರಾಯವಾಗಿವೆ ಎಂದು ಮಾಜಿ ಸಚಿವ ಬಿ.ಶಿವರಾಮು ಹೇಳಿದರು.
ತಲೂಕಿನ ಜಾವಗಲ್ ಹೋಬಳಿ ಬಂದೂರು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ535ನೇ ಕನಕ ಜಯಂತಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಕುಲದ ಕೀರ್ತಿ ಹೆಚ್ಚುವುದು ಸದಾಚಾರಗಳಿಂದಲೇ ಹೊರತು ಹುಟ್ಟಿನಿಂದಲ್ಲ ಎಂಬುದನ್ನು ದಾಸಪರಂಪರೆ ಸಾಬೀತು ಮಾಡಿದೆ.ಸಮಾಜ ಸುಧಾರಣೆಗೆ ಶ್ರಮಿಸಿದ ಮಹನೀಯರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ಬೇಸರದ ಸಂಗತಿಯಾಗಿದೆ.ಕನದಾಸರ ಚಿಂತನೆಗಳನ್ನು ಅಳವಡಿಸಿಕೊಂಡಲ್ಲಿ ಬದುಕು ಪರಿಪೂರ್ಣಗೊಳ್ಳಲಿದೆ ಎಂದು ಬಣ್ಣಿಸಿದರು.ಎಪಿಎಂಸಿ ಮಾಜಿ ಅಧ್ಯಕ್ಷ ದೇಶಾಣಿ ಅನಂದ್, ಬೆಳುವಳ್ಳಿ ಮಹದೇವಪ್ಪ, ಶಿಕ್ಷಕ ದೇವರಾಜ್, ಗ್ರಾಪಂ ಸದಸ್ಯ ಪ್ರಭಾಕರ್, ಮುಖಂಡ ಭೈರೇಶ್ ಸೇರಿ ಹಲವರು ಉತ್ಸವದಲ್ಲಿ ಹೆಜ್ಜೆಹಾಕಿದರು.