ಬಂಡೆ ಸ್ಫೋಟವಾಗಿ ಕಾರ್ಮಿಕ ಸಾವು

Published on

ಪಾವಗಡ:- ತಾಲೂಕಿನ ತಿರುಮಣಿ ಸಮೀಪ ಸೋಲಾರ್​ ಪಾರ್ಕ್​ ನಿಮಾರ್ಣ ಪ್ರದೇಶದಲ್ಲಿ ಬಂಡೆ ಬ್ಲಾಸ್ಟ್​ ಆಗಿ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭಿರವಾಗಿದೆ. ರಾಯಚೂರು ಮೂಲದ ಬಸವರಾಜು ಸ್ಥಳದಲ್ಲೇ ಮೃತಪಟ್ಟಿದ್ದು, ಅಚ್ಚಮ್ಮನಹಳ್ಳಿಯ ಶಿವಯ್ಯ ಗಾಯಗೊಂಡಿದ್ದಾರೆ.

ಕೆಎಸ್​ಪಿಡಿಸಿಎಲ್​ನಿಂದ 1,002 ಎಕರೆ ಪ್ರದೇಶದಲ್ಲಿ ಸೋಲಾರ್​ ಪಾರ್ಕ್​ ನಿಮಾರ್ಣ ಜವಾಬ್ದಾರಿಯನ್ನು ಜೆಎಸ್​ಡಬ್ಲ್ಯು ಕಂಪನಿಗೆ ನೀಡಲಾಗಿದೆ. ಪಾರ್ಕ್​ ನಿಮಾರ್ಣಕ್ಕಾಗಿ ಬಂಡೆ ಬ್ಲಾಸ್ಟ್​ ಮಾಡುತ್ತಿದ್ದ ವೇಳೆ ಸ್ಫೋಟಕ ಸಿಡಿದಿದೆ. ಈ ವೇಳೆ ಸಮೀಪದಲ್ಲೇ ಇದ್ದ ಬಸವರಾಜು ಮೃಪಟ್ಟಿದ್ದಾನೆ. ಶಿವಯ್ಯನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಂಡೆ ಸ್ಫೋಟದ ಬೆಂಕಿ ಅಕ್ಕಪಕ್ಕಕ್ಕೂ ಹಬ್ಬಿದೆ. ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬ್ಲಾಸ್ಟ್​ ಮಾಡಲು ಬಳಸಿರುವುದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕೆಎಸ್​ಪಿಡಿಸಿಎಲ್​ ಮಹೇಶ್​, ಗ್ರಾಮಾಂತರ ಸಿಪಿಐ ಗಿರೀಶ್​ ಭೇಟಿಮಾಡಿ ಪರಿಶೀಲಿಸಿಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net