ಬಂಡೀಪುರ ಪಾದಯಾತ್ರೆ ಮುಂದೂಡಿಕೆ

Published on

ಚಾಮರಾಜನಗರ: ಜಿಲ್ಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷ ತಡೆಗೆ ಒತ್ತಾಯಿಸಿ ಸಾಮೂಹಿ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನ.1ರಂದು ಕರೆ ನೀಡಿದ್ದ ಬಂಡೀಪುರ ಪಾದಯಾತ್ರೆ ಮತ್ತು ಸಾರಿ ತಡೆಯುವ ಪ್ರತಿಭಟನೆಯನ್ನು ಮುಂದೂಡಲಾಗಿದೆ.

ನ.27ರಂದು ಬಂಡೀಪುರಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿದ್ದರು. ಮಾನವ-ವನ್ಯಜೀವ ಸಂಘರ್ಷದ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ರೈತರನ್ನು ಭೇಟಿ ಮಾಡಿ ಮಾತನಾಡಿದರು. ಈ ವೇಳೆ ರೈತ ನಾಯಕ ಹೊನ್ನೂರು ಪ್ರಕಾಶ್ ಮಾತನಾಡಿ, ರೈತರ ಸಮಸ್ಯೆಗಳು, ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳ ಉಪಟಳ, ಬೆಳೆ ಹಾನಿ, ಪ್ರಾಣ ಹಾನಿ, ಸಾರಿ ಕಾಡಿನೊಳಗೆ ಪ್ರಾಣಿಗಳನ್ನು ನೋಡಲು ಒಳಗೆ ಬಿಡುವುದರಿಂದ ಅವು ಹೊರಗೆ ಬಂದು ಜನರಿಗೆ ತೊಂದರೆ ಕೊಡುತ್ತಿವೆ ಎಂದು ಸಚಿವರ ಗಮನಕ್ಕೆ ತಂದರು.

ನ.1ರಂದು ಬಂಡೀಪುರಕ್ಕೆ ಪಾದಯಾತ್ರೆ ನಡೆಸಿ ಸಾರಿ ತಡೆಯುವುದಾಗಿ ತಿಳಿಸಿದರು. ಈ ಸಂಬಂಧ ಅರಣ್ಯ ಸಚಿವರು ಸೂಕ್ತ ಕ್ರಮವಹಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮುಂದೂಡಲಾಗಿದೆ ಎಂದು ರೈತ ನಾಯಕ ಹೊನ್ನೂರು ಪ್ರಕಾಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net