ಬಂಡೀಪುರ ಅರಣ್ಯ ಇಲಾಖೆಯಲ್ಲಿ ಅನುದಾನ ದುರ್ಬಳಕೆ

Bandipura
Published on

ಚಾಮರಾಜನಗರ:  ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕೆಲವು ಕಾಮಗಾರಿಗೆ ಟೆಂಡರ್ ಕರೆಯದೆ ಸುಮಾರು 40 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸುವಂತೆ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಒತ್ತಾಯಿಸಿದ್ದಾರೆ.

ಕೆಲಸವಾಗುವ ಮುಂಚೆ ಚೆಕ್ ನೀಡಿಕೆ, ಲಂಟಾನ ತೆರವು, ಪೀಠೋಪಕರಣ ಖರೀದಿ, ಕಚೇರಿಗಳ ನವೀಕರಣ, ಒಂದೇ ಗೆಸ್ಟ್ ಹೌಸ್‌ಗೆ ಲಕ್ಷಾಂತರ ರೂ.ಸುಳ್ಳು ಲೆಕ್ಕ ತೋರಿಸಿರುವುದು ಸೇರಿದಂತೆ ಇತರ ಸಣ್ಣಪುಟ್ಟ ವಿಚಾರಗಳಿಗೆ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ರೂ. ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬುಧವಾರ ಗುಂಡ್ಲುಪೇಟೆದಲ್ಸುಲಿ ದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸರ್ಕಾರ ಕೂಡಲೇ ತನಿಖೆ ಮಾಡಬೇಕು. ತನಿಖೆ ಆಗುವವರೆಗೂ ಸಿಎಫ್ ಅವರನ್ನು ಅಮಾನತು ಮಾಡಬೇಕು. ಒಂದು ವೇಳೆ ಅಮಾನತು ಮಾಡಿದಿದ್ದರೆ ಉಸ್ತುವಾರಿ ಸಚಿವರಿಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಕುದಕೆರೆ ಸಂಪತ್ತು, ತಾಲೂಕು ಅಧ್ಯಕ್ಷ ಕಂದೇಗಾಲ ಹೊಸೂರು ಮಹೇಶ್, ಹಾಲಹಳ್ಳಿ ಮಹೇಶ್, ರಘು ಅಣ್ಣೂರುಕೇರಿ, ಷಣ್ಮುಖಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net