

ಚಾಮರಾಜನಗರ: ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ 100ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು.
ವಿಶ್ವ ಹಿಂದು ಪರಿಷತ್, ಬಜರಂಗದಳ ಗ್ರಾಮ ಘಟಕ ವತಿಯಿಂದ ಗ್ರಾಮದ ಕಾಳಮ್ಮನ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ ಶಿಬಿರದಲ್ಲಿ ಮೈಸೂರಿನ ನಾರಾಯಣ ಹೃದಯಾಲಯದ ವೈದ್ಯರಾದ ಡಾ.ಯಶಸ್ವಿನಿ ಮತ್ತು ತಂಡ ಜನರ ಆರೋಗ್ಯ ತಪಾಸಣೆ ಮಾಡಿತು.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಇಸಿಜಿ, ಜ್ವರ, ಕೆಮ್ಮು, ನೆಗಡಿ ಮತ್ತು ಇತರ ಕಾಯಿಲೆಗಳಿಗೆ ತಪಾಸಣೆ ಮಾಡಲಾಯಿತು. ಶಿಬಿರದಲ್ಲಿ ಗಡಿ ಯಜಮಾನ ಜಯಸ್ವಾಮಿ ಮಾತನಾಡಿದರು. ಬಜರಂಗದಳ ಜಿಲ್ಲಾ ಸಂಯೋಜಕ ರಮೇಶ್, ಗ್ರಾಮ ಘಟಕ ಅಧ್ಯಕ್ಷ ಚೆನ್ನಿಗಶೆಟ್ಟಿ ಮತ್ತು ಬಂಡಿಗೆರೆ ಗ್ರಾಮಸ್ಥರು ಇದ್ದರು.