ಬಂಟ್ವಾಳ ಲಕ್ಷ ರೂ.ಮೌಲ್ಯದ ಅಡಕೆ ಕಳವು

Published on

ಮಂಗಳೂರು: ಬಂಟ್ವಾಳ ತಾಲೂಕು ಕರೋಪ್ಪಾಡಿ ಗ್ರಾಮದ ಪೆರ್ನೆಮುಗೇರು ನಿವಾಸಿಯಾಗಿರುವ ಅಬ್ದುಲ್‌ ರಝಾಕ್‌ ತನ್ನ ಎದುರು ಅಡಕೆ ಹಾಗೂ ತೆಂಗಿನಕಾಯಿ ಶೇಖರಣೆ ಮಾಡುವ ಕೊಣೆಯಲ್ಲಿದ್ದ 15 ಗೋಣಿ ಚೀಲದಲ್ಲಿದ್ದ ಅಂದಾಜು ಸುಮಾರು 01 ಲಕ್ಷ ರೂ. ಮೌಲ್ಯದ, 300 ಕೆಜಿ ಇಡಿ ಅಡಕೆಯನ್ನುಕಳ್ಳರು ಕದ್ದೊಯ್ದಿದ್ದಾರೆ.

ಫೆ.25ರಂದು ರಾತ್ರಿ ವೇಳೆಯಲ್ಲಿ ಕಳ್ಳರು ಕೋಣೆಯ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net