

ಪೆಟ್ರೋಲಿಯಂ ಉತ್ಪನ್ನಕ್ಕೆ ಕನ್ನ
ಮಂಗಳೂರು: ಮಂಗಳೂರಿನಿಂದ ಹಾಸನ ಮೂಲಕ ಬೆಂಗಳೂರಿಗೆ ಪೂರೈಕೆಯಾಗುವ ಪೆಟ್ರೋಲಿಯಂ ಉತ್ಪನ್ನದ ಕೊಳವೆಯಿಂದ ಕಳವು ಮಾಡುತ್ತಿರುವುದು ಪತ್ತೆಯಾಗಿದ್ದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಳ ಗ್ರಾಮದಲ್ಲಿ ಐವನ್ ಎಂಬಾತನ ಜಾಗದಲ್ಲಿ ಪೈಪ್ ಲೈನ್ ಗೆ 1.5 ಇಂಚಿನ ಪೈಪ್ ಮತ್ತು ವಾಲ್ ಅಳವಡಿಸಿರುವ ಎಂಎಸ್ ಪ್ಲೇಟನ್ನು ವೆಲ್ಡ್ ಮಾಡಿ 55 ಮೀ ಉದ್ದದ ಪ್ಲೆಕ್ಷಿಬಲ್ ಪೈಪನ್ನು ಅಳವಡಿಸಿ 1.5 ಇಂಚು ವ್ಯಾಸ ಹೊಂದಿರುವ 3 ವಾಲ್ ಗಳನ್ನು ಅಳವಡಿಸಿ ಪೆಟ್ರೋಲಿಂ ಉತ್ಪನ್ನವನ್ನು ಕಳವು ಮಾಡುತ್ತಿರುವುದು ಕಂಡು ಬಂದಿದೆ. ಪೈಪ್ ಅಳವಡಿಸಿರುವ ಜಾಗವು ಐವನ್ ಗೆ ಸೇರಿದ ಜಾಗವಾಗಿದ್ದು ಈ ಕೃತ್ಯದಲ್ಲಿ ಐವನ್ ಭಾಗಿಯಾಗಿರುವ ಶಂಕೆ ಇದೆ. ಅಲ್ಲದೆ ಹಾನಿಯಾಗಿರುವ ಪೈಪ್ ಲೈನ್ ಮೊತ್ತ 90,000ರೂ ಆಗಿದ್ದು ಪೈಪ್ ಲೈನ್ ನಿಂದ ಕಳ್ಳತನ ಆಗಿರುವ ಪೆಟ್ರೋಲಿಯಂ ಉತ್ಪನ್ನವನ್ನು ಇನ್ನಷ್ಟೆ ಲೆಕ್ಕ ಮಾಡಬೇಕಾಗಿದೆ. ಕಳ್ಳತನ ಆಗಿರುವ ಪೆಟ್ರೋಲಿಯಂ ಉತ್ಪನ್ನದ ಪ್ರಮಾಣ ಮತ್ತು ಮೊತ್ತವನ್ನು ಮುಂದಿನ ಹಂತದಲ್ಲಿ ಒದಗಿಸುತ್ತೇವೆ ಎಂದು ದೂರುದಾರರು ತಿಳಿಸಿದ್ದಾರೆ.