ಬಂಟ್ವಾಳ ನಗರದಲ್ಲಿ ವಕೀಲನ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ಧರಣಿ

ಬಂಟ್ವಾಳ ನಗರದಲ್ಲಿ ವಕೀಲನ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ಧರಣಿ
Published on

ಅರಸೀಕೆರೆ: ಬಂಟ್ವಾಳ ನಗರದಲ್ಲಿ ವಕೀಲನ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಬುಧವಾರ ಧರಣಿ ನಡೆಸಿ ಉಪತಹಸೀಲ್ದಾರ್ ಫಾಲಾಕ್ಷ ಅವರಿಗೆ ಮನವಿ ಸಲ್ಲಿಸಿದರು.

ಹಿರಿಯ ನ್ಯಾಯವಾದಿ ಎನ್.ಡಿ.ಪ್ರಸಾದ್ ಮಾತನಾಡಿ,ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ನೆಪದಲ್ಲಿ ಮನೆಗೆ ನುಗ್ಗಿರುವ ಅಲ್ಲಿನ ಸ್ಥಳೀಯ ಪೊಲೀಸರು ಅಮಾನವೀಯ ರೀತಿಯಲ್ಲಿ ಬಟ್ಟೆ ಹರಿದು ಜೀಪಿನಲ್ಲಿ ಎಳೆದೊಯ್ದಿರುವುದು ಖಂಡನೀಯ.

ಸರ್ಕಾರ ತಕ್ಷಣವೇ ಹಲ್ಲೆಗೈದಿರುವ ಪೊಲೀಸರನ್ನು ಅಮಾನತು ಮಾಡಬೇಕು.ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಕುಮಾರ್, ಮಾಜಿ ಅಧ್ಯಕ್ಷ ಎಚ್.ಎಸ್.ಕೇಶವಮೂರ್ತಿ, ವಕೀಲರಾದ ವಿವೇಕ್, ಸಿದ್ದಮಲ್ಲಪ್ಪ, ಪ್ರಸನ್ನಕುಮಾರ್,ಉಮಾ, ರವಿಶಂಕರ್ ಸೇರಿ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net