ಬಂಟೋಡಿ ಹಿನ್ನೀರಿನಲ್ಲಿ ಶವ ಪತ್ತೆ

14hos1p araga
ಯುವಕ ನೀರಲ್ಲಿ ಮುಳುಗಿದ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಸಮಸ್ಯೆ ಆಲಿಸಿದರು.
Published on

ಹೊಸನಗರ: ತಾಲೂಕಿನ ಹೊಸೂರು ಗ್ರಾಪಂ ವ್ಯಾಪ್ತಿಯ ಬಂಟೋಡಿ ಹಿನ್ನೀರಿನಲ್ಲಿ ಉಕ್ಕಡ ಮಗುಚಿ ಶನಿವಾರ ನೀರುಪಾಲಾಗಿದ್ದ ಪೂರ್ಣೇಶ ಭಾನುವಾರ ಶವವಾಗಿ ಪತ್ತೆಯಾಗಿದ್ದಾನೆ.

ಪೊಲೀಸರು, ಅಗ್ನಿಶಾಮಕ ದಳ ಜಂಟಿ ಕಾರ್ಯಾಚರಣೆ ನಡೆಸಿದ್ದರೂ ಪೂರ್ಣೇಶನ ಸುಳಿವು ದೊರೆತಿರಲಿಲ್ಲ. ಭಾನುವಾರ ಮುಳುಗು ತಜ್ಞ ಈಶ್ವರ ಮಲ್ಪೆ ತಂಡವನ್ನು ಕರೆಸಲಾಗಿತ್ತು. ಶೋಧ ಕಾರ್ಯದ ಕೆಲಹೊತ್ತಿನಲ್ಲೇ 40 ಅಡಿ ಆಳದಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಆಗಮಿಸಿ ಶೋಧ ಕಾರ್ಯಾಚರಣೆ ವೀಕ್ಷಿಸಿದರು. ಶವವನ್ನು ದಡಕ್ಕೆ ತರುತ್ತಿದ್ದಂತೆ ಶೋಕದಲ್ಲಿ ಮುಳುಗಿದ ಮೃತನ ಕುಟುಂಬವನ್ನು ಸಂತೈಸಿದರು.

ಬಳಿಕ ಮಾತನಾಡಿ, ಅಂಡಗದೋದೂರು ಕಣಕಿ ಬಳಿ ತೂಗು ಸೇತುವೆ ಇದ್ದು, ಅಲ್ಲಿ ಬದಲಿ ಸೇತುವೆ ನಿರ್ಮಾಣವಾಗಿದೆ. ಆ ಸೇತುವೆಯನ್ನು ಇಲ್ಲಿಗೆ ಶಿಫ್ಟ್ ಮಾಡುವ ಸಲುವಾಗಿ ತಾಪಂ ಅಕಾರಿಗಳಿಗೆ ಎಸ್ಟಿಮೇಟ್ ತಯಾರಿಸಲು ಸೂಚಿಸಿದ್ದೇನೆ. ದುರಂತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಸರ್ಕಾರದೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net