ಬಂಟೇನಹಳ್ಳಿ ಗ್ರಾಪಂಗೆ ಧನಂಜಯ ಅಧ್ಯಕ್ಷ

26blrp4
Published on

ಬೇಲೂರು: ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಾಯಪುರದ ಧನಂಜಯ(ಸತೀಶ್), ಉಪಾಧ್ಯಕ್ಷರಾಗಿ ಡನಾಯ್ಕನಹಳ್ಳಿಯ ಜಯಮ್ಮ ಅವಿರೋಧವಾಗಿ ಆಯ್ಕೆಯಾದರು.


ತಾಲೂಕಿನ ಬಂಟೇನಹಳ್ಳಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನವು ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಬುಧವಾರ ಮಧ್ಯಾಹ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಜಯಮ್ಮ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ರಾಯಪುರದ ಧನಂಜಯ(ಸತೀಶ್) ಹಾಗೂ ಚಿಕ್ಕಬೇಡಗೆರೆ ದಾಸಪ್ಪ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯಿತು. ರಾಯಪುರದ ಧನಂಜಯ(ಸತೀಶ್) 10 ಮತ ಪಡೆದರೆ ಜಯ ಗಳಿಸಿದರು. ದಾಸಪ್ಪ 5 ಮತಗಳನ್ನು ಪಡೆದು ಪರಾಭವಗೊಂಡರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಘು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಗ್ರಾಪಂ ಸದಸ್ಯರಾದ ಪುಟ್ಟಸ್ವಾಮಿ, ಸುಮಾ, ಶಿವಮ್ಮ, ಸುಧಾ, ಮೀನಾಕ್ಷಮ್ಮ, ಮಹಮದ್ ರಫೀಕ್, ಪಿಡಿಒ ರಾಜಸೇಖರ್, ಗ್ರಾಮಸ್ಥರಾದ ಗೌಡೇಗೌಡ, ಅಪ್ಪಣ್ಣಗೌಡ, ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net