ಬಂಜಾರ ಸಮುದಾಯ ಮೂಲೆಗುಂಪು

CTD 22 BANJARA---0006
Published on

ಚಿತ್ರದುರ್ಗ: ರಾಜಕೀಯ ಪ್ರಾತಿನಿಧ್ಯ ನೀಡದ ಕಾಂಗ್ರೆಸ್, ಬಂಜಾರ ಸಮುದಾಯವನ್ನು ವಂಚಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ‌್ಯದರ್ಶಿ ಪಿ.ರಾಜೀವ್ ಹೇಳಿದರು.
ನಗರದ ವಿನಾಯಕ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಶಕ್ತಿ ಪ್ರದರ್ಶನ ಸಮಾವೇಶದಲ್ಲಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಾಂಡ ಅಭಿವೃದ್ಧಿ ನಿಗಮ ಸ್ಥಾಪಿಸಿ ಬಂಜಾರರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿದರು. ಕಾಂಗ್ರೆಸ್ ಸರ್ಕಾರ ಸಮುದಾಯಕ್ಕೆ ಕೆಪಿಎಸ್‌ಸಿ ಸದಸ್ಯತ್ವವನ್ನು ನೀಡಲಿಲ್ಲ. ಲೋಕಸಭೆಗೆ ಟಿಕೆಟ್ ಕೂಡ ನೀಡದೆ ಮೂಲೆಗುಂಪು ಮಾಡಿದೆ ಎಂದು ದೂರಿದರು.
ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್‌ಕುಮಾರ್ ಮಾತನಾಡಿ, ಬಂಜಾರರನ್ನು ಕಾಂಗ್ರೆಸ್ ಸರ್ಕಾರ ಹಿಂದಿನಿಂದಲೂ ನಿರ್ಲಕ್ಷಿಸಿಕೊಂಡು ಬರುತ್ತಿದೆ ಎಂದು ಆರೋಪಿಸಿದರು.
ಹಗರಿಬೊಮ್ಮನಹಳ್ಳಿ ಜೆಡಿಎಸ್ ಶಾಸಕ ನೇಮಿರಾಜ್‌ನಾಯ್ಕ, ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಬಸವರಾಜ್‌ನಾಯ್ಕ, ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಎಸ್.ಸಿ.ಲಿಂಬ್ಯನಾಯ್ಕ, ಗಿರೀಶ್‌ನಾಯ್ಕ, ಸುರೇಶ್‌ನಾಯ್ಕ, ಸತೀಶ್‌ನಾಯ್ಕ, ಜಯಸಿಂಹ ಖಾಟ್ರೋತ್, ವೀಣಾಬಾಯಿ, ಸುಶೀಲಾಬಾಯಿ, ಗೋವಿಂದನಾಯ್ಕ, ಚನ್ನಯ್ಯನಹಟ್ಟಿ ಮುಕುಂದನಾಯ್ಕ, ಪಾವಗಡದ ನಾಗಭೂಷಣನಾಯ್ಕ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net