ಬಂಜಾರ ಸಂಸ್ಕೃತಿ, ಸಂಸ್ಕಾರ ಕೃತಿಯಲ್ಲಿದೆ

Puture
Published on

ಚಿತ್ರದುರ್ಗ: ಬಂಜಾರ ಸಂಸ್ಕೃತಿ, ಸಂಸ್ಕಾರ ಕುರಿತ ವಿಚಾರಗಳು ಪುಟುರೆ ಕೃತಿಯಲ್ಲಿವೆ ಎಂದು ನಿವೃತ್ತ ಸಹ ಪ್ರಾಧ್ಯಾಪಕಿ ಡಾ.ಪಿ.ಯಶೋಧಾ ರಾಜಶೇಖರಪ್ಪ ಹೇಳಿದರು.

ಬಂಜಾರ ಭವನದಲ್ಲಿ ಶನಿವಾರ ಡಾ.ಕೆ.ಮಂಜುನಾಥ್ ನಾಯ್ಕ ಅವರ ‘ಪುಟುರೆ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃತಿಯೂ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜೀವನ ಚರಿತ್ರೆ, ಅವರ ಸಂದೇಶ, ನುಡಿಮುತ್ತು ಹಾಗೂ ಕಾಲಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಒಳಗೊಂಡಿದೆ. ಪುಟುರೆ ಹೆಸರು ವಿಶಿಷ್ಟವಾಗಿದೆ ಎಂದರು.

ಸಂತ ಸೇವಾಲಾಲ್ ಅವರು ಕಾಶಿ, ಹೈದರಾಬಾದ್, ಛತ್ತಿಸ್‌ಗಡ್ ಸೇರಿ ಉತ್ತರ ಮತ್ತು ದಕ್ಷಿಣ ಭಾರತದಾದ್ಯಂತ ತಮ್ಮ ತಂಡದ ಸಮೇತ ಸಂಚರಿಸಿ, ಜ್ಞಾನದ ಬೆಳಕನ್ನು ಜಗತ್ತಿಗೆ ಪಸರಿಸಿ, ಅನೇಕ ಪವಾಡದೊಂದಿಗೆ ಭವಿಷ್ಯದಲ್ಲಿ ನಡೆಯಬಹುದಾದ ಸಂಗತಿಗಳನ್ನು ತಿಳಿಸಿದ್ದಾರೆ. ಅವರ ತತ್ವಾದರ್ಶ ಇಡೀ ಜೀವಸಂಕುಲಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.

ಇದೇ ವೇಳೆ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಯದೇವ ನಾಯ್ಕ ಅವರನ್ನು ಗೌರವಿಸಲಾಯಿತು. ಸರ್ದಾರ್ ಸೇವಾಲಾಲ್ ಶ್ರೀ, ನಂದ ಮಸಂದ್ ಸೇವಾಲಾಲ್ ಶ್ರೀ ಸಾನ್ನಿಧ್ಯ ವಹಿಸಿದ್ದರು. ಪಿಡಬ್ಲೂೃಡಿ ಪ್ರಥಮ ದರ್ಜೆ ಗುತ್ತಿಗೆದಾರ ಜಿ.ಮಾಧವ ನಾಯ್ಕ, ಮುಖಂಡರಾದ ಜಿ.ರಾಜಾನಾಯ್ಕ, ಗಿರೀಶ್ ನಾಯ್ಕ್, ಎಂ.ಸುಮಿತ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net