ಬಂಗ್ರಕೂಳೂರು ಗುಡ್ಡೆಗೆ ಬೆಂಕಿ ದಟ್ಟ ಹೊಗೆ

Published on

ಮಂಗಳೂರು: ನಗರದ ಬಂಗ್ರಕೂಳೂರು ಬಳಿ ಗುಡ್ಡೆಗೆ ಬೆಂಕಿ ಬಿದ್ದು, ಪರಿಸರದ ಸುತ್ತಲೂ ನಾಲ್ಕೈದು ಕಿ.ಮೀ. ದೂರಕ್ಕೆ ದಟ್ಟ ಹೊಗೆ ಆವರಿಸಿಕೊಂಡಿದೆ.
ಇಲ್ಲಿನ ಗುಡ್ಡದಲ್ಲಿ ಒಣಗಿದ ಹುಲ್ಲುಗಾವಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಕ್ಷಣ ಮಾತ್ರದಲ್ಲಿ ಎಲ್ಲೆಡೆ ಪಸರಿಸಿದೆ. ಕದ್ರಿ, ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಅಗ್ನಿ ಶಮನ ಕಾರ್ಯಾಚರಣೆ ಕೈಗೊಂಡಿದ್ದಾರೆ. ದಟ್ಟ ಹೊಗೆಯಿಂದ ಪರಿಸರದ ನಿವಾಸಿಗಳಿಗೆ ಉಸಿರುಗಟ್ಟಿದ ಅನುಭವವಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net