ಬಂಗಾರಪೇಟೆ ತಹಸೀಲ್ದಾರ್ ಹತ್ಯೆಗೆ ಖಂಡನೆ

10BK2 (1)
Published on

ಬಸವಕಲ್ಯಾಣ: ಬಂಗಾರ ಪೇಟೆ ತಾಲೂಕಿನ ತಹಸೀಲ್ದಾರ್ ಬಿ.ಕೆ. ಚಂದ್ರಮೌಳೇಶ್ವರರ ಅವರ ಭೀಕರ ಹತ್ಯೆಯನ್ನು ತಾಲೂಕಿನ ಸರ್ಕಾರಿ ನೌಕರರ ಸಂಘ ಸೇರಿ ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ರಾಜ್ಯ ಸರ್ಕಾರಿ ನೌಕರರ ಸಂಘ, ಕಂದಾಯ ಇಲಾಖೆ ನೌಕರರ ಸಂಘ, ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಹಾಗೂ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕರ ಸಂಘಗದ ಪದಾಧಿಕಾರಿಗಳ ನಿಯೋಗ ಪಟ್ಟಣದ ಮಿನಿ ವಿಧಾನ ಸೌಧಕ್ಕೆ ತೆರಳಿ, ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ಗ್ರೇಡ್- 2 ತಹಸೀಲ್ದಾರ್ ಸಂಗಯ್ಯ ಸ್ವಾಮಿ ಅವರಿಗೆ ಸಲ್ಲಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೇತ್ರೆ ಮಾತನಾಡಿ, ಸರ್ಕಾರಿ ನೌಕರರ ಮೇಲೆ ಹಲ್ಲೆ, ದಾಳಿ, ಕೊಲೆ, ನಡೆಯುತ್ತಿರುವುದು ದುರದೃಷ್ಟಕರ. ತಾಲೂಕು ದಂಡಾಧಿಕಾರಿಯೇ ಜೀವ ತೆತ್ತಿರುವುದು ಭಯಾನಕ ಮತ್ತು ಅಮಾನವೀಯ ಕೃತ್ಯ. ಇದರಿಂದ ನೌಕರರ ಮನೋಬಲ ಕುಗ್ಗುತ್ತಿದೆ. ಸಿಬ್ಬಂದಿಯಲ್ಲಿ ಭಯಾತಂಕ ಮೂಡುತ್ತಿದೆ. ಆದ್ದರಿಂದ ಸರ್ಕಾರಿ ನೌಕರರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು. ಮೃತರ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ನೀಡಬೇಕು. ನೌಕರರ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಸಕರ್ಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮಹೇಂದ್ರ ಮೌರ್ಯ, ಖಜಾಂಚಿ ಸೂರ್ಯಕಾಂತ ಅಡಕೆ, ಪ್ರಮುಖರಾದ ಚನ್ನವೀರ ಜಮಾದಾರ, ರಾಜು ತಳವಾರ, ಲತಿಫ್, ಕಾಶೀನಾಥ ಚಂಡಿಕಾಪುರೆ ರಾಮರತನ್, ಶಂಕರ ಔರಾದೆ, ಯೋಗರಾಜ, ಶ್ರೀಶೈಲ, ಶಿವಕುಮಾರ್, ರಾಜಕುಮಾರ, ವಿಠಾಬಾಯಿ, ಸಮಿಯೊದ್ದೀನ್, ಉಮಾಕಾಂತ, ಮಹೇಶ ಭೋಸ್ಲೆ, ಕಾವೇರಿ, ವಿಜಯ ಶಾಂತಿ, ಜ್ಯೋತಿ, ಸ್ವಪ್ನಾ, ಸವಿತಾ, ಆಶಾರಾಣಿ, ನೀಲಮ್ಮ, ರಾಜಶ್ರೀ, ವಿಜಯಲಕ್ಷ್ಮೀ ಬಾಲಾಜಿ, ಗುರುನಾಥ ಸೇರಿ ಇತರರಿದ್ದರು. ಮೃತರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಮೌನಾಚರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net