ಬಂಗಾರ ವಶ, ಆರೋಪಿ ಬಂಧನ

06 YERRISWAMY 04
Published on

ಬಳ್ಳಾರಿ : ವಿಚಾರಣಾಧೀನ ಕೈದಿಯನ್ನು ಪೊಲೀಸರು ವಶಕ್ಕೆ ಪಡೆದು 16.14 ಲಕ್ಷ ರೂ. ಮೌಲ್ಯದ 269 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಇಲ್ಲಿನ ಕರಿಮಾರೆಮ್ಮ ಕಾಲನಿಯ ಹನುಮಂತ ಬಂಧಿತ. ಆರೋಪಿಯನ್ನು ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಿಸಿದ ವೇಳೆ ನಗರದ ಆರು ಕಡೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಕುರಿತು ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net