ಹಿರಿಯರಿಗೆ ಗೌರವ ನೀಡಿ

KKNR-02
ತಳಕಲ್ ಗ್ರಾಮದ ಗ್ರಂಥಾಲಯದಲ್ಲಿ ಮಾಸಿಕ ಹಿರಿಯರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ವೃದ್ಧೆ ಪ್ರಮೀಳಾಬಾಯಿ ಸಾರಂಗಮಠ, ಪಿಡಿಒ ವೀರನಗೌಡ ಚನ್ನವೀರಗೌಡ, ಗ್ರಂಥಾಲಯ ಸಲಹಾ ಸಮಿತಿ ಸದಸ್ಯ ಜಗದೀಶ್ ಕರ್ಕಿಹಳ್ಳಿ, ಗ್ರಂಥಪಾಲಕಿ ಮೌಲಾಬಿ ಕರಮುಡಿ ಇದ್ದರು.
Published on

ಕುಕನೂರು: ಹಿರಿಯರನ್ನು ಆರೈಕೆ ಮಾಡುವುದು ಹಾಗೂ ಅವರನ್ನು ಗೌರವಿಸಬೇಕು ಎಂದು ಪಿಡಿಒ ವೀರನಗೌಡ ಚನ್ನವೀರಗೌಡ ಸಲಹೆ ನೀಡಿದರು.

ತಾಲೂಕಿನ ತಳಕಲ್ ಗ್ರಾಮದ ಗ್ರಂಥಾಲಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಜಿಎಚ್‌ಕೆ ಕಾರ್ಯಕ್ರಮದಡಿ ಇತ್ತೀಚೆಗೆ ಆಯೋಜಿಸಿದ್ದ ಮಾಸಿಕ ಹಿರಿಯರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ವೃದ್ಧೆ ಪ್ರಮಿಳಾಬಾಯಿ ಸಾರಂಗಮಠ ಅವರಿಗೆ ಸನ್ಮಾನಿಸಿ ಮಾತನಾಡಿದರು.

ಇಂದಿನ ಮಕ್ಕಳಿಗೆ ಹಿರಿಯರನ್ನು ಗೌರವಸುವುದನ್ನು ಮತ್ತು ಅವರನ್ನು ಕಾಳಜಿ ಮಾಡುವುದನ್ನು ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹಿರಿಯರ ಮನೋಬಲ ಹೆಚ್ಚಿಸುವುದರ ಜತೆಗೆ ಸಮಾಜದಲ್ಲಿ ಹಿರಿಯರ ಸ್ಥಾನ ಬಲಪಡಿಸುತ್ತವೆ ಎಂದರು.

ಹಿರಿಯ ನಾಗರಿಕರು ಪರಸ್ಪರ ಶುಭಾಶಯ ಕೋರಿ ಸಂತಸಪಟ್ಟರು. ಹಿರಿಯರು, ಮಕ್ಕಳು ಹಾಗೂ ಸ್ಥಳೀಯರು ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net