ಫ್ಲೈಓವರ್‌ನ ಮೇಲೆ ಹೊತ್ತಿ ಉರಿದ ಕಾರು

ಫೋಟೋ ಶೀರ್ಷಿಕೆ 10ಸಿಆರ್_ಪಿ-1ಎ.
Published on

ಚನ್ನರಾಯಪಟ್ಟಣ: ತಾಂತ್ರಿಕ ದೋಷದಿಂದ ರೆನಾಲ್ಡ್ ಡಸ್ಟರ್ ಕಾರು ಹೊತ್ತಿ ಉರಿದ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಚನ್ನರಾಯಪಟ್ಟಣ ತಾಲೂಕಿನ ಗೌಡಗೆರೆ ಫ್ಲೈ ಓವರ್‌ನ ನಡುರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆ.ಸಿ.ವಸಂತ್ ಕಾರ್ಲೆ ದಂಪತಿ ಚಲಿಸುತ್ತಿದ್ದ ರೆನಾಲ್ಡ್ ಡಸ್ಟರ್ ಕಾರು ಹೊತ್ತಿ ಉರಿದಿದೆ. ಕೆ.ಸಿ.ವಸಂತ್ ಕಾರ್ಲೆ ಮತ್ತು ದಂಪತಿ ತಮ್ಮ ಸ್ನೇಹಿತ ಶಿವರಾಜ್.ಸಿ. ಅವರ ಕೆಎ 05 ಎಂಎನ್ 9337 ನಂಬರಿನ ರೆನಾಲ್ಟ್ ಡಸ್ಟರ್ ಕಾರನ್ನು ಪಡೆದು ತಮ್ಮ ಸ್ವಂತ ಕೆಲಸದ ನಿಮಿತ್ತ ಹಾಸನಕ್ಕೆ ತೆರಳುತ್ತಿದ್ದ ವೇಳೆ ಚನ್ನರಾಯಪಟ್ಟಣ ತಾಲೂಕು ಗೌಡಗೆರೆ ಗ್ರಾಮದ ಫ್ಲೈ ಓವರ್ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಪ್ರಾರಂಭದಲ್ಲಿ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಹೊಗೆಯನ್ನು ನೋಡಿ ತಕ್ಷಣ ಕಾರನ್ನು ನಿಲ್ಲಿಸಿ ಕೆಳಗಿಳಿದ ಕೆ.ಸಿ.ವಸಂತ್ ಪಾರ್ಲೆ, ಕಾರಿನಲ್ಲಿದ್ದ ಮಡದಿ ಪಲ್ಲವಿಯನ್ನು ಅವರನ್ನು ಸಹ ಕೆಳಕ್ಕಿಳಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಬಳಿಕ ಕಾರಿನ ಬೆಂಕಿ ಹಾರಿಸಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಕೊನೆಗೆ ಕಾರು ನಡುರಸ್ತೆಯಲ್ಲಿ ಹೊತ್ತಿಕೊಂಡು ಉರಿದಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಅಗಮಿಸಿ ಬೆಂಕಿ ನಂದಿಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆದರೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net