ಫ್ಲೇಕ್ ಅಳವಡಿಕೆ ವಿಚಾರ:ತಿಮ್ಮರಾಜು ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ

ಫ್ಲೇಕ್ ಅಳವಡಿಕೆ ವಿಚಾರ:ತಿಮ್ಮರಾಜು ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ
Published on

ಹೊಳೆನರಸೀಪುರ : ತಾಲೂಕಿನ ನಗರ್ತಿ ಗ್ರಾಮದಲ್ಲಿ ಉದ್ಘಾಟನೆ ಪ್ರಚಾರಕ್ಕಾಗಿ ಫ್ಲೇಕ್ ಅಳವಡಿಕೆ ವಿಚಾರದಲ್ಲಿ ತಾಲೂಕಿನ ಶ್ರವಣೂರು ಗ್ರಾಮದಲ್ಲಿ ತಿಮ್ಮರಾಜು ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಘಟನೆ ನಡೆದಿರುವ ಹಿನ್ನಲೆಯಲ್ಲಿ ತಾಲೂಕು ಕುರುಬರ ಸಂಘ ತೀವ್ರವಾಗಿ ಖಂಡಿಸಿತು.


ತಾಲೂಕು ಪತ್ರಕರ್ತ ಸಂಘದಲ್ಲಿ ಸುದ್ದೀಗೋಷ್ಟಿ ನಡೆಸಿದ ತಾಲೂಕು ಕುರುಬ ಸಂಘದ ಉಪಾಧ್ಯಕ್ಷ ಬಾಗಿವಾಳು ಮಂಜೇಗೌಡ ಅವರು ಮಾತನಾಡಿ ನಗರ್ತಿ ಗ್ರಾಮದಲ್ಲಿನ ದೇವಾಲಯ ಉದ್ಘಾಟನೆ ಪ್ಲೇಕ್ಸ್ ಅನ್ನು ಶ್ರವಣೂರಿನಲ್ಲಿ ಆಳವಡಿಕೆ ವೇಳೆ ಗ್ರಾಮದಲ್ಲಿನ ಸಂಗೋಳ್ಳಿ ರಾಯಣ್ಣ ಪುತ್ತಳಿಗೆ ಅಡ್ಡಲಾಗಿ ಫ್ಲೇಕ್ಸ ಆಳವಡಿಕೆಗೆ ಮುಂದಾದ ವೇಳೆ ತಿಮ್ಮರಾಜು ರಾಯಣ್ಣ ಪುತ್ತಳಿ ಮುಂದೆ ಆಳವಡಿಕೆ ಬೇಡ ಪಕ್ಕದಲ್ಲಿ ಆಳವಡಿಸಿ ಎಂದು ತಗಾದೆ ಮಾಡಿದ್ದಾರೆ. ಆಳವಡಿಕೆ ಮಾಡುತ್ತಿದ್ದ ನಗರ್ತಿ ಗ್ರಾಮದ ಬುಲೆಟ್ ಜಯರಾಮ, ಶ್ರವಣೂರು ಗ್ರಾಮದ ಬೈರೇಗೌಢ, ಮೂಡ್ಲಿಗೌಡರ ಮಗ ಸುರೇಶ್, ರಾಮೇಗೌಡರ ಮಗ ಲೋಕೇಶ್, ರಾಜು, ರೇವಣ್ಣನ ಮಗ ನಾಗೇಂದ್ರ ಅವರುಗಳು ತಿಮ್ಮರಾಜು ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ತಿಮ್ಮರಾಜು ತಲೆಗೆ ಹರಿತವಾದ ಆಯುದದಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತಿಮ್ಮರಾಜು ಅವರ ತಲೆಗೆ ತೀವ್ರವಾಗಿ ರಕ್ತ ಸುರಿದು ಕುಸಿದು ಬಿದ್ದಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ತಿಮ್ಮರಾಜುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ, ಆದರೂ ಘಟನೆಗೆ ಕಾರಣರಾದವರ ಮೇಲೆ ಪೋಲಿಸರು ಇಲ್ಲಿಯವರೆಗೆ ಕ್ರಮಕೈಗೊಂಡಿಲ್ಲ ಮತ್ತು ಅವರುಗಳನ್ನು ಬಂಧಿಸಿಲ್ಲ ಎಂದು ಗೋಷ್ಟಿಯಲ್ಲಿ ಆರೋಪಿಸಿದರು.
ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರೂ ಸಹ ಪೋಲಿಸರು ಕಠಿಣ ಕ್ರಮ ಕೈಗೊಳ್ಳದೆ ಸಾಮಾನ್ಯ ಮೊಕದೊಮ್ಮ ಹೂಡಿದ್ಧಾರೆ. ಇದು ನ್ಯಾಯತರವಲ್ಲ ಎಂದು ದೂರಿದ ಅವರು ಪೋಲಿಸರು ಈ ಘಟನೆಯಲ್ಲಿ ಕ್ಷೇತ್ರದ ಶಾಸಕ ರೇವಣ್ಣ ಅವರ ಅಣತಿಯಂತೆ ನಡೆದುಕೊಳ್ಳುತ್ತಿರುವುದು ವಿಷಾಧನೀಯ ಸಂಗತಿ ಎಂದು ದೂರಿದರು.
ಹಲ್ಲೆ ವೇಳೆ ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿ ಇದ್ದರೂ ಸಹ ಹಲ್ಲೆ ತಡೆಯಲು ಮುಂದಾಗಗಲಿಲ್ಲ ಹಾಗು ಹಲ್ಲೆಯಾದ ವ್ಯಕ್ತಿ ತಿಮ್ಮರಾಜುವನ್ನು ಚಿಕಿತ್ಸೆಗೆ ಕೊಂಡೊಯ್ಯಲು ಸಹಕರಿಸದೆ ತಾವುಗಳೆ ಖುದ್ದಾಗಿ ಫ್ಲೆಕ್ಸ್ ಆಡಳವಡಿಕೆಗೆ ಸಹರಿಸಿದ್ದು ತೀವ್ರ ವಿಷಾದದ ಸಂಗತಿ ಎಂದು ದೂರಿದರು.
ಇತ್ತೀಚಿನ ದಿನಗಳಲ್ಲಿ ಕ್ಷೇತ್ರದ ಶಾಸಕ ಮಾಜಿ ಸಚಿವ ರೇವಣ್ಣ ಅವರು ತಾಲೂಕಿನ ಕುರುಬ ಸಮಾಜದ ವಿರುದ್ದ ಒಂದಲ್ಲ ಒಂದು ರೀತಿ ಸೇಡು ತೀರಿಸಿಕೊಳ್ಳುವ ಹಂತ ತಲುಪಿರುವುದು ನಮ್ಮಗಳ ಮನಸ್ಸಿಗೆ ಭಾರಿ ಬೇಸರ ತಂದಿದೆ.
ಇನ್ನು ಮುಂದಾದರೂ ಶಾಸಕ ರೇವಣ್ಣ ಅವರು ನ್ಯಾಯ ರೀತಿಯಲ್ಲಿ ನಡೆದುಕೊಂಡು ನ್ಯಾಯಾನ್ಯಾಯವನ್ನು ಅವಲೋಕಿಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹ ಪಡಿಸಿ ಇದಕ್ಕೆ ವ್ಯತರಿಕ್ತವಾಗಿ ನಡೆದುಕೊಂಡಲ್ಲಿ ನಮ್ಮ ಕುರುಬ ಸಮಾಜ ಬಹಿರಂಗವಾಗಿ ಹೋರಾಟಕ್ಕೆ ಇಳಿಯಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ತಾಲೂಕು ಕುರುಬ ಸಂಘದ ಕಾರ್ಯದರ್ಶಿ ಎಂ.ವಿ.ದಾಶರಥಿ, ಕೆಪಿಸಿಸಿ ಮಾಜಿ ಸದಸ್ಯ ಪುಟ್ಟೇಗೌಡ, ನಿಂಗೇಗೌಡ, ಪುಟ್ಟರಾಜು, ಬಂಟರತಳಾಲು ರಾಜೇಗೌಡ, ಮಂಜುನಾಥ್ ಹಾಗು ಕುರುಬ ಸಮಾಜದ ಮುಖಂಡರುಗಳು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net