ಫ್ರಾನ್ಸ್​ನಲ್ಲಿ ಸಿಲುಕಿರುವ ಕನ್ನಡಿಗರು

8 vikram 11
Published on

ಧಾರವಾಡ: ಲಾಕ್​ಡೌನ್ ಹಿನ್ನೆಲೆಯಲ್ಲಿ ಫ್ರಾನ್ಸ್​ನಲ್ಲಿ ಸಿಲುಕಿರುವ ಕನ್ನಡಿಗ ವಿದ್ಯಾರ್ಥಿಗಳು ತಮ್ಮನ್ನು ತವರಿಗೆ ಕರೆಯಿಸಿಕೊಳ್ಳುವಂತೆ ವಿಡಿಯೋ ಮೂಲಕ ಸರ್ಕಾರಕ್ಕೆ ಅಳಲು ತೋಡಿಕೊಂಡಿದ್ದಾರೆ.

ಮಾಸ್ಟರ್ ಆಫ್ ಸೈನ್ಸ್ (ಎಂಎಸ್) ಶಿಕ್ಷಣ ಪಡೆಯಲು ಕರುನಾಡಿನಿಂದ ಫ್ರಾನ್ಸ್​ಗೆ ತೆರಳಿರುವ ಸುಮಾರು 20 ವಿದ್ಯಾರ್ಥಿಗಳು ಲಾಕ್​ಡೌನ್ ಹಿನ್ನೆಲೆಯಲ್ಲಿ ಅಲ್ಲೇ ಸಿಲುಕಿಕೊಂಡಿದ್ದಾರೆ. ಆ ದೇಶದಲ್ಲೂ ಕರೋನಾ ಹೆಚ್ಚುತ್ತಿರುವ ಭೀತಿಯಿಂದ ವಿದ್ಯಾರ್ಥಿಗಳು ವಿಡಿಯೋ ಸಂದೇಶದ ಮೂಲಕ ತಮ್ಮನ್ನು ಸ್ವದೇಶಕ್ಕೆ ಕರೆಯಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.

ಧಾರವಾಡ ಕೇದಾರ ಕುರಂದಕರ, ಸಚ್ಚಿದಾನಂದ, ಬೆಂಗಳೂರಿನ ಪೂಜಾ ಹಾಗೂ ತೇಜಸ್ ಎಂಬುವವರು ವಿಡಿಯೋ ಮೂಲಕ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಫ್ರಾನ್ಸ್​ನಲ್ಲೂ ಕರೋನಾ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ನಮ್ಮನ್ನ ಭಾರತಕ್ಕೆ ಕರೆಯಿಸಿಕೊಳ್ಳುವಂತೆ ಭಾರತೀಯ ರಾಯಭಾರಿ ಕಚೇರಿಗೂ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಪಾಲಕರು ಸಹ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಸಹ ಸಮಾಲೋಚನೆ ನಡೆಸಿದ್ದಾರೆ. ಹೇಗಾದರೂ ಮಾಡಿ ನಮ್ಮನ್ನು ಆದಷ್ಟು ಬೇಗ ಭಾರತಕ್ಕೆ ಕರೆಯಿಸಿಕೊಳ್ಳಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net