ಫ್ಯಾಷಿಯೋನವಿ ಪ್ರದರ್ಶನಕ್ಕೆ ಚಾಲನೆ

25Ravig6
ಬೆಳಗಾವಿಯಲ್ಲಿ ಫ್ಯಾಷಿಯೋನವಿ ಪ್ರದರ್ಶನಕ್ಕೆ ಕಲಾವಿದೆ ನಮ್ರತಾ ರಾಜಶೇಖರ ಮೌರ್ಯ ಚಾಲನೆ ನೀಡಿದರು. ವೈಶಾಲಿ ಬಾರ್ವೆ, ಸರೋಜಿನಿ ಡೆಂಗೋಲೆ, ಯೋಗಿತಾ ಪಾಟೀಲ, ಜ್ಯೋತಿ ಮಿರಜಕರ್, ಡಾ.ಅಂಜನಾ ಬಾಗೇವಾಡಿ, ಮಾಯಾ ಮುತಗೇಕರ್ ಇದ್ದರು.
Published on

ಬೆಳಗಾವಿ: ನಗರದ ತಿಲಕವಾಡಿಯ ಹೋಟೆಲ್ ನೇಟಿವ್ ಬೈ ಚಾನ್ಸರಿಯಲ್ಲಿ ಫ್ಯಾಶನಿಸ್ಟ್ ವತಿಯಿಂದ ಹಮ್ಮಿಕೊಂಡಿರುವ ನಾಲ್ಕನೇ ಆವೃತ್ತಿಯ ಫ್ಯಾಷಿಯೋನವಿ ಮೇಳವನ್ನು ಕಲಾವಿದೆ ನಮ್ರತಾ ರಾಜಶೇಖರ ಮೌರ್ಯ ಶುಕ್ರವಾರ ಉದ್ಘಾಟಿಸಿದರು. ಪ್ರದರ್ಶನಕ್ಕೆ ಮೊದಲ ದಿನವೇ ಗ್ರಾಹಕರಿಂದ ಬಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರದರ್ಶನದಲ್ಲಿ ವಿವಿಧ ವಿನ್ಯಾಸಕರು ಸಿದ್ಧಪಡಿಸಿದ ಗೃಹಬಳಕೆ ಉತ್ಪನ್ನ, ಗೃಹ ಅಲಂಕಾರ ವಸ್ತುಗಳು, ಆಭರಣಗಳು, ಜವಳಿ ಉತ್ಪನ್ನಗಳು ಲಭ್ಯ ಇದ್ದು, ಅತಿ ಅಪರೂಪದ ಆಭರಣಗಳು ಹಾಗೂ ಗೃಹಬಳಕೆ ಉತ್ಪನ್ನ ಹಾಗೂ ಗೃಹ ಅಲಂಕಾರಿಕ ವಸ್ತುಗಳನ್ನು ಗ್ರಾಹಕರು ಖರೀದಿಸಲು ಮುಗಿಬಿದಿದ್ದರು. 26ರಂದು ರಾತ್ರಿ 8ರವರೆಗೆ ಈ ಪ್ರದರ್ಶನ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ವೈಶಾಲಿ ಬಾರ್ವೆ, ಸರೋಜಿನಿ ಡೆಂಗೋಲೆ, ಯೋಗಿತಾ ಪಾಟೀಲ, ಜ್ಯೋತಿ ಮಿರಜಕರ್, ಡಾ.ಅಂಜನಾ ಬಾಗೇವಾಡಿ, ಮಾಯಾ ಮುತಗೇಕರ್, ವಿಜಯಲಕ್ಷ್ಮೀ, ಅಭಿಷೇಕ, ಫ್ಯಾಶನಿಸ್ಟ್ ವ್ಯವಸ್ಥಾಪಕ ಅಖಿಲೇಶ ಪಾಂಡೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net