

ಬಳ್ಳಾರಿ : ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಫ್ಯಾಷನ್ ಸ್ಟೋರ್ ಎಗ್ಜಿಬಿಷನಲ್ಲಿ ಸ್ಯಾರೀಸ್, ಡ್ರೆಸ್ ಮೆಟಿರಿಯಲ್ಸ್, ಕುರ್ತಾಸ್, ಫ್ಯಾಷನ್ ಜ್ಯುವೆಲರಿ, ಹೋಮ ಸೇರಿದಂತೆ ಮೂವತ್ತು ವಿವಿಧ ಬಗೆಯ ಬ್ರಾಂಡೆಡ್ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುವುದು ಅನುಕೂಲವಾಗಿದೆ ಎಂದು ಎಂದು ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಹೇಳಿದರು.
ಇಲ್ಲಿನ ರಾಯಲ್ ಫೋರ್ಟ್ ಹೋಟೆಲ್‌ನಲ್ಲಿ ಒಂದೇ ಸೂರಿನಡಿಯಲ್ಲಿ ಭಾರತ ಎಂಬ ಧ್ಯೆಯವಾಕ್ಯದೊಂದಿಗೆ ಎಲ್ಲಾ ಬ್ರಾಂಡ್ ವಸ್ತುಗಳ ಪ್ರದರ್ಶನವನ್ನು ಇಂಡಿಯನ್ ಲೈಫ್ ಸ್ಟೈಲ್ ಎಗ್ಜಿಬಿಷನ್ ಉದ್ಘಾಟಿಸಿ ಮಾತನಾಡಿದರು.
ಎಫ್‌ಎಸ್‌ನ ವ್ಯವಸ್ಥಾಪಕ ರವಿ ಆರೋರ್ ಮಾತನಾಡಿ, ಕಳೆದ 14 ವರ್ಷಗಳಿಂದ ಬಳ್ಳಾರಿಯಲ್ಲಿ ವಿವಿಧ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿ ಜಿಲ್ಲೆಯ ಜನರಿಗೆ ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಕಡಿಮೆ ಬೆಲೆಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಕಾಶ್ಮೀರ, ದೆಹಲಿ, ಕಲ್ಕತ್ತಾ, ಪಂಜಾಬ್, ಬಾಂಬೆ, ಚಂಡಿಗಡ್ ಮತ್ತು ಬೆಂಗಳೂರಿನ ಹೆಸರಾಂತ ಕಂಪನಿಗಳ ಉತ್ಕೃಷ್ಟ ಗುಣಮಟ್ಟದ ವಸ್ತುಗಳು ಇಲ್ಲಿ ಸಿಗಲಿವೆ. ಅಲ್ಲದೆ ಮಧ್ಯಮ ಮತ್ತು ಸಾಮಾನ್ಯ ಜನರಿಗೆ ಬೇಕಾದ ವಸ್ತುಗಳು ರಿಯಾಯಿತಿಯಲ್ಲಿ ಸಿಗುತ್ತವೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರತಿದಿನ ಮುಂಜಾನೆ 10.30 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಎಗ್ಜಿಬಿಷನ್ ತೆರೆದಿರುತ್ತದೆ. ಮೇ 24 ರಿಂದ ಮೇ 26 ರವರೆಗೆ ಇಲ್ಲಿನ ರಾಯಲ್ ಪೋರ್ಟ್ ಹೋಟೆಲ್‌ನಲ್ಲಿ ನಡೆಯಲಿದೆ.