ಫ್ಯಾಷನ್ ಶೋ, ಪ್ರಶಸ್ತಿ ಪ್ರದಾನ ನಾಳೆ

Fashion Show
Published on

ಮೈಸೂರು: ತಿಬ್ಬಾಸ್ ಗ್ರೂಪ್ ಫೌಂಡೇಷನ್ ವತಿಯಿಂದ ‘ನ್ಯಾಷನಲ್ ಐಕಾನ್ ಮಾಡೆಲ್ ಆ್ಯಂಡ್ ಸೀಸನ್-3’ ಫ್ಯಾಷನ್ ಶೋ ಹಾಗೂ ರಾಷ್ಟ್ರೀಯ ಮಾನ್ಯತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆ.20ರಂದು ಬೆಳಗ್ಗ 10ಕ್ಕೆ ನಗರದ ಕಿಂಗ್ಸ್ ಎಲ್ ಡನ್ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದೆ.


ಒಂದು ವರ್ಷದಿಂದ 75 ವರ್ಷದ ವರೆಗಿನ ರೂಪದರ್ಶಿಗಳು ವೇದಿಕೆ ಮೇಲೆ ಹೆಜ್ಜೆ ಹಾಕಲಿದ್ದಾರೆ. ಇದು ರಾಷ್ಟ್ರಮಟ್ಟದ ಸ್ಪರ್ಧೆಯಾಗಿದ್ದು, ವಿವಿಧ ಉಡುಗೆ ತೊಡುಗೆ ತೊಟ್ಟು ಮಾಡೆಲ್‌ಗಳು ಹಲವು ಸುತ್ತುಗಳಲ್ಲಿ ಸ್ಪರ್ಧೆಯನ್ನು ಎದುರಿಸಲಿದ್ದಾರೆ. ಮೊದಲ ಸುತ್ತಿನಲ್ಲಿ ಸಾಂಸ್ಕೃತಿಕ ಉಡುಗೆ ಇರುವುದು ವಿಶೇಷವಾಗಿದೆ ಎಂದು ರೂಪದರ್ಶಿ ಡಿ.ಸಿ.ನಾಗೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸಲಿದ್ದು, ಮೈಸೂರು ವಿಭಾಗದ ರೂಪದರ್ಶಿಯರ ಸಂಖ್ಯೆ ಅಧಿಕವಾಗಿದೆ. ಎಲ್ಲ ಸ್ಪರ್ಧಿಗಳಿಗೂ ಪ್ರಮಾಣಪತ್ರ, ಟ್ರೋಫಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.


ನಟಿ, ಫ್ಯಾಷನ್ ಕೊರಿಯೋಗ್ರಾಫರ್ ಎಸ್.ಶಿವಾನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net