ಫೋಟೋ ತೆಗಿಸಿಕೊಳ್ಳಲು ಹೋಗಿ ಪ್ರವಾಸಿಗ ನೀರು ಪಾಲು

07-07-25--krs1 (2)
Published on

 ಕೆ.ಆರ್.ಸಾಗರ : ಬೆಳಗೊಳ ಗ್ರಾಮದ ಬಳಿ ಸರ್ವಧರ್ಮ ಆಶ್ರಮದ ಸಂಪರ್ಕ ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ಳಲು ಹೋದ ಪ್ರವಾಸಿಗ ಆಯತಪ್ಪಿ ಬಿದ್ದು ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಉಲ್ಲಂಘಾಲ ಗ್ರಾಮದ ನಿವಾಸಿ ಮಹೇಶ್ ಹಲವು ವರ್ಷಗಳಿಂದ ಮೈಸೂರಿನಲ್ಲಿ ಆಟೋ ಚಾಲಕನಾಗಿದ್ದು, ಭಾನುವಾರ ತನ್ನ ಸೇಹಿತ ಕೃಷ್ಣ ಅವರ ಜತೆ ಕೆ.ಆರ್.ಸಾಗರ ನೋಡಲು ಬಂದಿದ್ದರು. ಅಣೆಕಟ್ಟೆಯ ಹಿನ್ನೀರು ನೋಡಿಕೊಂಡು ಬಳಿಕ ಕೆ.ಆರ್.ಸಾಗರ ಅಣೆಕಟ್ಟೆಯಿಂದ ಹೊರಬಿಟ್ಟಿರುವ ನೀರು ನೋಡಲು ಬಂದಿದ್ದು ವಾಹನಗಳು ಜಾಮ್ ಆಗಿದ್ದ ಕಾರಣ ಅಲ್ಲಿಂದ ಬೆಳಗೊಳ ಬಲಮುರಿ ಬಳಿಯ ಸರ್ವಧರ್ಮ ಆಶ್ರಮದ ಬಳಿ ಜೋರಾಗಿ ಹರಿಯುತ್ತಿದ್ದ ನೀರನ್ನು ನೋಡಿ ಫೋಟೋ ತೆಗೆಸಿಕೊಳ್ಳಲು ಹೋದಾಗ ಮಹೇಶ್ ಆಯತಪ್ಪಿ ಬಿದ್ದು ಕೊಚ್ಚಿ ಹೋಗಿದ್ದಾರೆ. ತಕ್ಷಣ ಸಹಾಯಕ್ಕಾಗಿ ಸ್ನೇಹಿತ ಕೃಷ್ಣ ಅಲ್ಲಿದ್ದ ಸಾರ್ವನಿಕರನ್ನು ಸಹಾಯಕ್ಕಾಗಿ ಕೂಗಿದ್ದು ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಧಾವಿಸಿದ ಕೆ.ಆರ್.ಸಾಗರ ಪೊಲೀಸರು ಹುಡುಕಾಟ ನಡೆಸಿದ್ದು, ಸೋಮವಾರ ಸಂಜೆ ತನಕ ಹುಡುಕಿದರೂ ಮಹೇಶ್ ಪತ್ತೆಯಾಗಿಲ್ಲ. ಮೃತನ ಸ್ನೇಹಿತ ಕೃಷ್ಣ ನೀಡಿದ ದೂರಿನ ಮೇರೆಗೆ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net