ಫೋಟೊಗಾಗಿ ಚಿಂಚನಸೂರ ಬೆಂಬಲಿಗರ ಪುಂಡಾಟಿಕೆ

KANDKUR 02
Published on

ಯಾದಗಿರಿ: ಸರ್ಕಾರಿ ಕಾರ್ಯಕ್ರಮದ ಬ್ಯಾನರ್ನಲ್ಲಿ ಎಂಎಲ್ಸಿ ಬಾಬುರಾವ್ ಚಿಂಚನಸೂರ ಫೋಟೊ ಬಳಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಚಿಂಚನಸೂರ ಬೆಂಬಲಿಗರು ಪುಂಡಾಟಿಕೆ ನಡೆಸಿದ ಪ್ರಸಂಗ ಯಾದಗಿರಿ ತಾಲೂಕಿನ ಸಾವೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗುರುಮಠಕಲ್ ಕ್ಷೇತ್ರದ ಸಾವೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 5 ಕೋಟಿ ರೂ.ವೆಚ್ಛದಲ್ಲಿ ನಿರ್ಮಿಸುತ್ತಿರುವ ಸೈದಾಪುರ-ಯಾದಗಿರಿ ರಸ್ತೆ ಸುಧಾರಣೆ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮವಿತ್ತು. ಶಾಸಕ ಕಂದಕೂರ ಮುಂಚೆ ಬಾಬುರಾವ್ ವೇದಿಕೆ ಬಂದಿದ್ದರು. ಬ್ಯಾನರ್ನಲ್ಲಿ ನಮ್ಮ ನಾಯಕರ ಫೋಟೊ ಬಳಸಿಲ್ಲ ಎಂದು ಕೆಲವರು ಕಿರಿಕ್ ಮಾಡತೊಡಗಿದರು.

ಅಷ್ಟೊತ್ತಿಗೆ ಶಾಸಕ ಕಂದಕೂರ ಆಗಮಿಸಿದರು. ಇಬ್ಬರ ನಾಯಕ ಬೆಂಬಲಿಗರ ಮಧ್ಯೆ ಮಾತಿಗೆ ಮಾತು ಬೆಳೆದು, ಕೊನೆಗೆ ಕುರ್ಚಿಗಳನ್ನು ಎಸೆದು, ಬ್ಯಾನರ್ ತೆರವುಗೊಳಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿಮರ್ಾಣಗೊಂಡಿತು. ಎರಡೂ ಗುಂಪುಗಳನ್ನು ಸಮಾಧಾನಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಕೊನೆಗೆ ಲೋಕೋಪಯೋಗಿ ಅಕಾರಿಗಳಿಗೆ ಕಾರ್ಯಕ್ರಮ ನಡೆಸಲು ಶಾಸಕ ಕಂದಕೂರ ಸೂಚನೆ ನೀಡಿದರು. ತದ ನಂತರ ಉದ್ಘಾಟನೆಗೊಳಿಸಿ, ವೇದಿಕೆಯಿಂದ ನಿರ್ಗಮಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net