

ಭಾಲ್ಕಿ: ಕರೊನಾ ಹಿನ್ನೆಲೆಯಲ್ಲಿ ಎಲ್ಲ ಭಕ್ತರು ಶ್ರಾವಣ ಮಾಸವನ್ನು ಮನೆಯಲ್ಲಿಯೇ ಇಷ್ಠಲಿಂಗ ಪೂಜೆ, ಶರಣರ ವಚನ ಪಾರಾಯಣ, ಸಾಮೂಹಿಕ ಪ್ರಾರ್ಥನೆ, ವಚನ ಚಿಂತನ ಹಾಗೂ ಪ್ರವಚನ ಕೇಳುವ ಮೂಲಕ ಸರಳವಾಗಿ ಆಚರಿಸಬೇಕು ಎಂದು ಹಿರೇಮಠ ಸಂಸ್ಥಾನದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಬಸವಭಕ್ತರಿಗೆ ಲಿಂಗಾಯತ ಸಂಸ್ಕೃತಿ ಪರಿಚಯಿಸುವ ಸದುದ್ದೇಶದಿಂದ ಮರಾಠಿ ಭಾಷೆಯಲ್ಲಿ 21ರಿಂದ ಆಗಸ್ಟ 22ರವರೆಗೆ ಸಂಜೆ 06 ರಿಂದ 6.30ರವರೆಗೆ ಲಿಂಗಾಯತ ತತ್ವದರ್ಶನ ಎಂಬ ವಿಷಯದ ಕುರಿತು ಫೇಸ್ಬುಕ್ ಲೈವ್ ಮೂಲಕ ಪ್ರವಚನ ನೀಡಲಿದ್ದಾರೆ. ಶ್ರೀ ಗುರುಬಸವ ಪಟ್ಟದ್ದೇವರು ಕನ್ನಡದಲ್ಲಿ ಅನುಭವ ಮಂಟಪ ದರ್ಶನ ಕುರಿತು 06.30 ರಿಂದ 07.00ರ ವರೆಗೆ ಫೇಸ್ಬುಕ್ ಲೈವ್ ಮೂಲಕ ಪ್ರವಚನ ನೀಡಲಿದ್ದಾರೆ. ಶ್ರೀ ಮಹಾಲಿಂಗ ಸ್ವಾಮೀಜಿ ತೆಲುಗು ಭಾಷೆಯಲ್ಲಿ 05.15 ರಿಂದ 05.45ರ ವರೆಗೆ ಫೇಸ್ಬುಕ್ ಲೈವ್ ಪ್ರವಚನ ಮಾಡಲಿದ್ದಾರೆ. ಎಲ್ಲಾ ಬಸವ ಭಕ್ತರು https://www. facebook.com /hiremathasa msthanabhalki/ live ಲಿಂಕ್ ಬಳಸಿಕೊಂಡು ಪೂಜ್ಯರ ಪ್ರವಚನವನ್ನು ಆಲಿಸಬೇಕೆಂದು ತಿಳಿಸಿದ್ದಾರೆ.