

ಮೈಸೂರು: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಶ್ರೀ ಜ್ಞಾಲಾಮುಖಿ ತ್ರಿಪುರಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಫೆ.16ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ಫೆ.16ರಂದು ಏಕಾದಶವಾರ, ರುದ್ರಾಭಿಷೇಕ, ಸುವರ್ಣಾಂಲಕಾರ ಸಹಸ್ರ ನಾಮಾರ್ಚನೆ ನಿವೇಧನೆ, ಮಹಾಮಂಗಳಾರತಿ ರಾಜೋಪಾಚಾರ, ರಾಷ್ಟ್ರಾಶೀರ್ವಾದ, ತೀರ್ಥಪ್ರಸಾದ ವಿನಿಯೋಗ ನಂತರ ಮಧ್ಯಾಹ್ನ 12.30 ಗಂಟೆಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಪ್ರದೋಷಕಾಲದ ಪೂಜೆ, ತ್ರಿಶತಿ ನಾಮರ್ಚನೆ ಮಹಾಮಂಗಳಾರತಿಯನ್ನು ರಾತ್ರಿ 8.30ಗಂಟೆಗೆ ನೇರವೇರಿಸಲಾಗುವುದು.
ಫೆ.17ರಂದು ಪಂಚಮಿ ಚಿತ್ತ ನಕ್ಷತ್ರ ಶ್ರೀಯವರಿಗೆ ಏಕದಶವಾರ ರುದ್ರಾಭಿಷೇಕ ಸಹಸ್ರ ನಾಮಾರ್ಚನೆ ವಿಶೇಷ ಪೂಜೆಗಳು ಕದಲಿ ಅಲಂಕಾರ ಮಧ್ಯಾಹ್ನ 12.30ಗಂಟೆಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.
ಫೆ.18ರಂದು ಷಷ್ಠಿ ಸ್ವಾತಿ ನಕ್ಷತ್ರ ಶ್ರೀಯವರಿಗೆ ಏಕಾದಶವಾರ ರುದ್ರಾಭಿಷೇಕ, ಪಂಚೋಪಚಾರ ಪೂಜೆ ಮಹಾಮಂಗಳಾರತಿ ಮಧ್ಯಾಹ್ನ 12.30 ಗಂಟೆಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಕಾಲಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.