

ಬಾಗಲಕೋಟೆ: ಒಲವಿನ ಪಯಣ ಚಲನಚಿತ್ರ ಫೆ.೨೧ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಕಿಶನ್ ಬಲ್ನಾಡ್ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳಗುಂದ ಕ್ರಿಯೆಷನ್ ನಿರ್ಮಾಣ ಸಂಸ್ಥೆಯಿAದ ಚಿತ್ರವು ನಿರ್ಮಾಣಗೊಂಡಿದೆ, ಒಲವಿನ ಪಯಣವು ಹೊಸಬರಿಂದ ಕೂಡಿದ್ದು, ಇದು ನನ್ನ ಮೊದಲ ನಿರ್ದೇಶನದ ಚಿತ್ರವಾಗಿದೆ. ಚಿತ್ರವು ಒಂದು ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಯುವಕನ ಬದುಕಿನ ಕಥೆ ಇದಾಗಿದೆ ಎಂದರು.
ಚಿತ್ರೀಕರಣವು ಮಡಿಕೇರಿ, ಮೈಸೂರು, ಬೆಂಗಳೂರು ಸೇರಿದಂತೆ ಹಲವಡೆ ಮಾಡಲಾಗಿದೆ. ಚಿತ್ರದ ನಾಯಕ ಸುನೀಲ, ನಾಯಕಿ ಕುಶಿ, ಪ್ರೀಯಾ ಹೆಗಡೆ, ಪೋಷಕ ಕಲಾವಿದರಾಗಿ ಪದ್ಮಜಾರಾವ್, ನಾಗೇಶ ಮಯ್ಯಾ, ಪೃಥ್ವಿರಾಜ್ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದಾರೆ. ಅಂದಾಜು ೩೦ ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.